ಶ್ರೀ ಕೃಷ್ಣ ಮಠ ಪರ್ಯಾಯ : ಪೊಲೀಸ್ ಇಲಾಖೆಗೆ ಶೀರೂರು ಮಠದ ಗೌರವ ಸಮರ್ಪಣೆ

0
72

ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಕಾಲದಲ್ಲಿ ಸಹಕರಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಸರ್ಕಲ್ ಇನ್ಸ್ಪೆಕ್ಟರ್ಗಳು,ಸಬ್ ಇನ್ಸ್ಪೆಕ್ಟರ್ಗಳು ಹಾಗೂ ಕರ್ತವ್ಯ ನಿರ್ವಹಿಸಿದ ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಶಾಲು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಉಡುಪಿ ಎಸ್ ಪಿ ಡಾ.ಹರಿರಾಂ ಶಂಕರ್, ಸುಧಾಕರ್ ನಾಯ್ಕ್ ಎಡಿಷನಲ್ ಎಸ್ ಪಿ ,ಪ್ರಭು ಡಿ.ಟಿ ಡಿ ವೈ ಎಸ್ ಪಿ, ತಿಮ್ಮಪ್ಪ ಗೌಡ ಡಿ ವೈ ಎಸ್ ಪಿ ಹಾಗೂ ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯ ಹಾಗೂ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಮೋಹನ್ ಭಟ್ ಮಧುಕರ್ ಮುದ್ರಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here