ಶ್ರೀ ಕೃಷ್ಣ ಶಿಶು ಮಂದಿರ ಕಂದೂರು; ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0
178

ಶ್ರೀ ಕೃಷ್ಣ ಶಿಶು ಮಂದಿರ ಕಂದೂರು ಸಜೀಪ ಮೂಡ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿಗಳಿಗೆ ಶ್ರೀ ಕೃಷ್ಣ ವೇಷ ತೋರಿಸಿ ಮಡಿಕೆಗಳನ್ನು ಹೊಡೆಸಲಾಯಿತು.

ಪುಟಾಣಿಗಳಿಂದ ವಿವಿಧ ವಿನೋದಾವಳಿ ನಡೆಸಲಾಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಶ್ರೀ ಕೃಷ್ಣ ಭಗವಂತ ಭಗವದ್ಗೀತೆಯ ಮೂಲಕ ಜಗತ್ತಿಗೆ ನೀಡಿದ ಸಂದೇಶ ಪಾಲಿಸುವುದರ ಮೂಲಕ ಕೃಷ್ಣ ತತ್ವವನ್ನು ಅನುಷ್ಠಾನ ಮಾಡುವುದರ ಮೂಲಕ ಸಂಸಾರಿಕ ಗೊಂದಲಗಳಿಂದ ಮುಕ್ತಿಯನ್ನು ಪಡೆಯಬಹುದು ಎಂಬುದಾಗಿ ತಿಳಿಸಿದರು.

ವೇದಿಕೆಯಲ್ಲಿ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಸುಬ್ರಾಯ ಕಾರoತ , ಕೆ ಲಕ್ಷ್ಮೀನಾರಾಯಣ ಭಟ್, ಪದ್ಯಾಣ ಯಶವಂತ ದೇರಾಜೆಗುತ್ತು , ಸುರೇಶ್ ಐತಾಳ ಬಿ ವಿಜಯಲಕ್ಷ್ಮಿ ಮಯ್ಯ, ಜಗದೀಶ ಐತಾಳ್, ಸೋಮನಾಥ , ರಕ್ಷಿತಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here