ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಾಲೆತ್ತೂರು ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ವಾರ್ಷಿಕೋತ್ಸವ

0
38

ಸಾಲೆತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ ) ವಿಟ್ಲ ಇದರ ಸಾಲೆತ್ತೂರು ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳಾದ ಸಾಲೆತ್ತೂರು ಎ, ಸಾಲೆತ್ತೂರು ಬಿ, ಕೊಲ್ನಾಡು ಎ. ಒಕ್ಕೂಟಗಳ ವಾರ್ಷಿಕೋತ್ಸವ ಕಾರ್ಯಕ್ರಮ, ಸಾಲೆತ್ತೂರು ರಾಜೀವ್ ಗಾಂಧಿ ಸೌಹಾರ್ದ ಭವನ ದಲ್ಲಿ ರವಿವಾರ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯ ಅಧ್ಯಕ್ಷ ದಿನೇಶ್ ಶೆಟ್ಟಿ.ವಹಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ 2ರ ನಿರ್ದೇಶಕ ಬಾಬು ನಾಯ್ಕ್ ಯೋಜನೆಯು ನಡೆದು ಬಂದ ಹಾದಿ, ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಹಾಗೂ ಒಕ್ಕೂಟ ನಿರ್ವಹಣೆ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.

ಜನಜಾಗೃತಿ ವೇದಿಕೆಯ ಸದಸ್ಯ ರಾಜಾರಾಮ್ ಹೆಗ್ಡೆ ಕುದ್ರಿಯಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಮನೆ ಬಾಗಿಲಿಗೆ ವರ ಪ್ರಸಾದ ರೂಪದಲ್ಲಿ ಬಂದಿರುತ್ತದೆ ಈ ಕಾರ್ಯವು ನಮ್ಮ ಹಿರಿಯ ತಲೆಮಾರಿಗೆ ನೆನಪಿದೆ ಅದನ್ನು ನಾವು ನಮ್ಮ ಕಿರಿಯ ತಲೆಮಾರಿಗೆ ನೆನಪಿಸುವ ಕಾರ್ಯವನ್ನು ನಾವು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತಮ ಪ್ರಗತಿ ಬಂದು ಸಂಘ, ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರುಗಳನ್ನು ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ 1937ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಲಯನ್ ರಾಮ್ ಪ್ರಸಾದ್ ರೈ ತಿರುವಾಜೆ. ಕೇಂದ್ರ ಒಕ್ಕೂಟ ಅಧ್ಯಕ್ಷರಾದಂತಹ ನವೀನ್ ಚಂದ್ರ ಕಾನಂತ್ತೂರು. ಉಪಾಧ್ಯಕ್ಷರಾದ ರಾಜೇಂದ್ರ ರೈ. ಕೊಲ್ನಾಡ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶ್ರಫ್. ಸಾಲೆತ್ತೂರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ. ಭಜನಾ ತರಬೇತುದಾರಿ ಕುಮಾರಿ ಹರ್ಷಿತಾ ರೈ. ಶೌರ್ಯ ವಿಪತ್ತು ಘಟಕದ ಅಧ್ಯಕ್ಷ ಪುರುಷೋತ್ತಮ್ ಮಾವೆ. ಸಾಲೆತ್ತೂರು ಎ ಒಕ್ಕೂಟದ ಅಧ್ಯಕ್ಷರು ಈಶ್ವರ ಪೂಜಾರಿ. ಸಾಲೆತ್ತೂರು ಬಿ ಒಕ್ಕೂಟ ದ ಅಧ್ಯಕ್ಷರು ಸುರೇಶ್ ನಾಯ್ಕ್. ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಅರವಿಂದ ರೈ ಉಪಸ್ಥಿತರಿದ್ದರು.

ಸಾಲೆತ್ತೂರು ವಲಯದ ಮೇಲ್ವಿಚಾರಕಿ ಸವಿತಾ ನಾರಾಯಣ್ ಸ್ವಾಗತಿಸಿ. ಸ್ಥಾಪಕ ಅಧ್ಯಕ್ಷರಾದ ಪಿ. ಜಯರಾಮ ಶೇಖ್ ವಂದಿಸಿದರು.ಸಾಲೆತೂರು ಎ ಒಕ್ಕೂಟದ ಕಾರ್ಯದರ್ಶಿ ರವಿಕುಮಾರ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here