ಬೆಳ್ಮಣ್ : ಶ್ರೀಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀದುರ್ಗಾ ಪರಮೇಶ್ವರೀದೇಗುಲದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು ವಾರ್ಷಿಕ ರಥೋತ್ಸವ, ಧರ್ಮದೈವಗಳ ನೇಮೋತ್ಸವ, ವಿವಿಧ ಧಾರ್ಮಿಕ ಅನುಷ್ಠಾನಗಳು ಫೆ.14ರ ಶನಿವಾರದಿಂದ ಫೆ.16ರ ಸೋಮವಾರ ಪರ್ಯಂತ ನಡೆಯಲಿವೆ.
ನ.14ರಂದು ಬೆಳಗ್ಗೆ 9ರಿಂದು ಫಲಾನ್ಯಾಸ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಧ್ವಜಾರೋಹಣ, ಆದ್ಯ ಗಣಯಾಗ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಪರಿವಾರ ದೈವಗಳ ಆರಾಧನೆ, ಮಹಾಪೂಜೆ, ಬಲಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7ರಿಂದ ಕಲ್ಲೋಕ್ತ ಪೂಜೆ, ರಂಗಪೂಜೆ, ಬಲಿ ನಡೆಯಲಿದ್ದು , ಫೆ.15ರ ರವಿವಾರ ಬೆಳಗ್ಗೆ ವಿವಿಧ ಧಾರ್ಮಿಕ ಅನುಷ್ಠಾನಗಳು, ‘ಮಹಾಪೂಜೆ, ಬಲಿ, ರಜತ ಪಲ್ಲಕ್ಕಿ ಉತ್ಸದ, ಪಲ್ಲಪೂಜೆ, ರಥೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಬೆಳಗ್ಗೆ 10ರಿಂದ ಆರ್ ಎಸ್ಬಿ ಮಹಿಳಾ ವೇದಿಕೆ ಭಜನ ಮಂಡಳಿ ಮಣಿಪಾಲ ಇವರಿಂದ ಭಜನೆ, ಸಂಜೆ 6.30ರಿಂದ ಶ್ರೀ ನರಸಿಂಹ ಭಜನ ಮಂಡಳಿ ನರಸಿಂಗೆ ಇವರಿಂದ ಭಜನೆ, ಸಂಜೆ 7ರಿಂದ ಕಲೋಕ್ತ ಪೂಜೆ, ರಂಗಪೂಜೆ, ಬಲಿ, ಮಹಾಬಲಿ ಉತ್ಸವ, ರಥೋತ್ಸವ, ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 11 ರಿಂದ ಮಂಡಳಿ ಶ್ರೀಮಹಾಕಾಳಿ ಭಜನಾ ಮಂಡಳಿ ಮಂಗಲ್ದಿಮಠ ಪಳ್ಳಿ ಇವರ ಸಹಯೋಗದೊಂದಿಗೆ ‘ಅಹೋರಾತ್ರಿ ಭಜನʼ ಕಾರ್ಯಕ್ರಮ ನಡೆಯಲಿದೆ.
ಫೆ.16ರ ಸೋಮವಾರ ಬೆಳಗ್ಗೆ 9ರಿಂದ ಅವಭೃತ ಸ್ನಾನ, ಕಟ್ಟೆ ಪೂಜೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಸೇವೆ, ಪ್ರಸಾದ ವಿತರಣೆ, ಧ್ವಜಾವರೋಹಣ, ಸಂತರ್ಪಣೆ, ಸಂಜೆ 6ಕ್ಕೆ ಕಲ್ಪೋಕ್ತ ಪೂಜೆ, ಧರ್ಮದೈವಗಳ ನೇಮೋತ್ಸವ ಸಂಪನಗೊಳ್ಳಲಿದೆ ಎಂದು ಶ್ರೀಕೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ ತಿಳಿಸಿದ್ದಾರೆ.

