ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಮೂಡುಬಿದಿರೆ ತಾಲೂಕು ಮಟ್ಟದ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಈ ದಿನ ಶ್ರೀ ದವಳ ಕಾಲೇಜ್ ನ ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನ ಮ್ಮ ವೇದಿಕೆ ಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮ ದ ಉದ್ಘಾಟನೆ ಯನ್ನು ಮೂಡುಬಿದಿರೆ ತಾಲೂಕಿನ ಮಾಜಿ ಸಚಿವರು ಹಾಗೂ ಶಾಸಕರು ಆಗಿರುವ ಶ್ರೀ ಕೆ. ಅಭಯಚಂದ್ರ ಜೈನ್ ಇವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ಯನ್ನು ನೀಡಿದರು. ಇವರು ಉದ್ಘಾಟನಾ ಮಾತುಗಳನ್ನಾಡುತ್ತಾ ಮಾತ್ರಶ್ರೀ ಅಮ್ಮ ನವರು ಮಹಿಳೆಯರಿಗಾಗಿ ಹಾಕಿಕೊಂಡಿರುವ ಈ ವಿಶೇಷ ಕಾರ್ಯಕ್ರಮ ಜ್ಞಾನ ವಿಕಾಸ ಕಾರ್ಯಕ್ರಮ. ಇದರಿಂದ ಎಷ್ಟೋ ಮಹಿಳೆಯರು ಮನೆಯಿಂದ ಹೊರಗೆ ಬಂದು ಮಾತಾಡುವ ಧೈರ್ಯ ಬಂದಿದೆ. ಇದಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮವೇ ಮುಖ್ಯ ಕಾರಣ ಎಂದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ದಿಗಂಬರ ಜೈನ ವಿದ್ಯಾ ವರ್ಧಕ ಸಂಘದ ಸಂಚಾಲಕರದ ಹೇಮರಾಜ್ ಜೈನ್ ಇವರು ಭಾಗಾವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಪೊಲೀಸ್ ಠಾಣೆಯ ಉಪ ನೀರಿಕ್ಷಕರಾದ ಪ್ರತಿಭಾ ರವರು ಭಾಗವಹಿಸಿ ಕಾನೂನಿನ ಬಗ್ಗೆ, ಹಾಗೂ ತಾಯಿಯಂದಿರು ಮಕ್ಕಳನ್ನು ಪೋಷಣೆ ಮಾಡುವಲ್ಲಿ ಯಾವ ರೀತಿ ಕಾಳಜಿ ವಹಿಸಬೇಕು, ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ಇನ್ನೊರ್ವ ಮುಖ್ಯ ಅತಿಥಿಯಾದ ಮೂಡುಬಿದಿರೆ ಪುರ ಸಭೆಯ ಅಧ್ಯಕ್ಷರಾದ ಜಯಶ್ರೀ ಕೇಶವ ಇವರು ಮಹಿಳೆಯರಿಗೆ ಸಮಾಜದಲ್ಲಿ ಮುಂದೆ ಬರಲು ಇದೊಂದು ಉತ್ತಮ ವೇದಿಕೆ ಇದನ್ನು ತಾವೆಲ್ಲರೂ ಬಳಸಿಕೊಂಡು ಮುಂದೆ ಬನ್ನಿ ಎಂದರು. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಜಿಲ್ಲಾ ನಿರ್ದೇಶಕರಾದ ಗೌರವನ್ವಿತ ಶ್ರೀ ದಿನೇಶ್ ಸರ್ ರವರು ಜ್ಞಾನ ವಿಕಾಸ ಕಾರ್ಯಕ್ರಮ ದಲ್ಲಿ ನಡೆಸಲಾಗುವ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ಯನ್ನು ನೀಡಿದರು. ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರ ಶಿಸ್ತು, ಅಚ್ಚುಕಟ್ಟುತನ ಶ್ಲಾಘ ನೀಯ ಎಂದರು. ಕಾರ್ಯಕ್ರಮದ ಬಹಳ ಪ್ರಾಮುಖ್ಯವಾದ ಅಂಗ ಗೋಷ್ಠಿ ಕಾರ್ಯಕ್ರಮ. ಸದ್ರಢ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಬಗ್ಗೆ ಗೋಷ್ಠಿ ಕಾರ್ಯಕ್ರಮ ವನ್ನು ಪ್ರೊಫೆಸರ್ ಮಿತ್ರ ಪ್ರಭಾ ಹೆಗ್ಡೆ, ನಿವೃತ್ತ ಪ್ರಿನ್ಸಿಪಾಲರು, ಮಾತನಾಡಿ ಸಮಾಜದಲ್ಲಿ ಮಹಿಳೆಯ ಸ್ಥಾನ ಮಾನಏನು, ಒಬ್ಬಳು ಮಹಿಳೆ ಇವತ್ತು ಮನಸ್ಸು ಮಾಡಿದರೆ ಏನನ್ನು ಸಾಧಿಸಸಬಳ್ಳಲು ಎಂಬುದಕ್ಕೆ ಇವತ್ತಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ಇಂದಿನ ಸಮಾಜದಲ್ಲಿ ಶಿಕ್ಷಣ ಬಹಳ ಪ್ರಾಮುಖ್ಯವಾಗಿದೆ. ಶಿಕ್ಷಣ ದ ಜೊತೆ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ವನ್ನು ಬೆಳೆಸುದು ಬಹಳ ಪ್ರಾಮುಖ್ಯತೆ. ಇಂದಿನ ಕಾರ್ಯಕ್ರಮದಲ್ಲಿ ಸದಸ್ಯರು ಮಾಡಿದ ಪುಷ್ಪ ಗುಚ್ಛ ದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು.
ಸಭಾ ಕಾರ್ಯಕ್ರಮ ದ ಬಳಿಕ ಕೇಂದ್ರದ ಸದಸ್ಯರಿಂದ ವಿವಿಧ ರೀತಿಯ ಸಾಂಸ್ಕೃ ತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಕ್ಕೆ ಕೇಂದ್ರದ ಸದಸ್ಯರಾದ ಶ್ರೀಮತಿ ಲೀಲಾಕ್ಷಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾ ಯ್ತು. ಕೇಂದ್ರದ ಸದಸ್ಯರಾದ ಪದ್ಮಾವತಿ ಹಾಗೂ ಲತಾ ಹೆಗ್ಡೆ ಇವರು ಅನಿಸಿಕೆ ವ್ಯಕ್ತ ಪಡಿಸಿದರು. ತಾಲೂಕಿನ ಯೋಜನಾಧಿಕಾರಿ ಶ್ರೀ ಬಿ ಧನಂಜಯ ಸರ್ ಸ್ವಾಗತಿಸಿ, ಸಮನ್ವಯಧಿಕಾರಿ ಶ್ರೀಮತಿ ವಿದ್ಯಾ ಧನ್ಯವಾದವಿತ್ತರು. ಲೆಕ್ಕ ಪರಿಶೋಧಕರಾದ ನಾಗೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಣೆ ಮಾಡಿದರು.

