ಬೆಳ್ತಂಗಡಿ : ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾದ್ಯಕ್ಷರಾಗಿ ಅಭಿಷಕ್ತರಾದ ಅ ವಂ ಜೇಮ್ಸ್ ಪಟ್ಟೇರಿಲ್ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪರವಾಗಿ ಅಭಿನಂದಿಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸಂಟ್ ಪಾಯ್ಸ್, ಧರ್ಮಸ್ಥಳ ಡಿ.ಎಮ್.ಸಿ ವಿಭಾಗದ ಟಿ.ವಿ. ದೇವಸ್ಯ ಹಾಗು ಉಜಿರೆ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಶ್ರೀ ಅಬ್ರಹಾಂ ಜೆಮ್ಸ್ ಇವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಎಸ್‌ಡಿಎಮ್ ಆಸ್ಪತ್ರೆ ಉಜಿರೆ ಇದರ ವತಿಯಿಂದ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಜನಾರ್ಧನ್ ಹಾಗೂ ಸಿಬ್ಬಂದಿ ವರ್ಗದವರು ನೂತನ ಬಿಷಪ್ ಅವರನ್ನು ಸನ್ಮಾನಿಸಿದರು.

