ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ ) ವಿಟ್ಲ, ಪಾದ್ನೂರು A ಮತ್ತು C ಒಕ್ಕೂಟಗಳ ವಾರ್ಷಿಕೋತ್ಸವ ಕಾರ್ಯಕ್ರಮ

0
49

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ ) ವಿಟ್ಲ, ಪಾದ್ನೂರು A ಮತ್ತು C ಒಕ್ಕೂಟಗಳ ವಾರ್ಷಿಕೋತ್ಸವ ಕಾರ್ಯಕ್ರಮವು ವಿಟ್ಲ ಪಾದ್ನೂರು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಾರಾಯಣ ಶೆಟ್ಟಿ ಕುಲ್ಯಾರ್ ನಡೆಸಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ಮಂಡಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸುರೇಶ ಗೌಡ ರವರು ಯೋಜನೆಯ ನಡೆದು ಬಂದ ಹಾದಿಯ ಬಗ್ಗೆ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಕ್ಷೇತ್ರದ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ಮಾತಾಡಿದರು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಜಯಂತ್ ಪೂಜಾರಿ, ಮಲರಾಯಿ ಭಜನಾ ಮಂಡಳಿ ಅಧ್ಯಕ್ಷರಾದ ಅರವಿಂದ್ ರೈ ಮೂರ್ಜೆಬೆಟ್ಟು,ಶಿಲ್ಪಾ ಶ್ರೀ ಯುವಕ ಮಂಡಲದ ಅಧ್ಯಕ್ಷರಾದ ರೋಹಿತ್ ಚಂಬರಡ್ಕ, ಫ್ರೆಂಡ್ಸ್ ಕಾಪುಮಜಲು ಅಧ್ಯಕ್ಷರಾದ ವಿನಯ್, ಅರಳಿವೃಂದ ಭಜನಾ ಮಂಡಳಿ ಸಂಚಾಲಕರಾದ ರಮೇಶ್ ಕಡಂಬು, ಪಂಚಾಯತ್ ಉಪಾಧ್ಯಕ್ಷರಾದ ಪ್ರೇಮಲತಾ, ಶೌರ್ಯ ಘಟಕದ ಅಧ್ಯಕ್ಷರಾದ ಚಂದ್ರಹಾಸ್, ಒಕ್ಕೂಟದ ಅಧ್ಯಕ್ಷರಾದ ಹರೀಶ್ ಕುಲಾಲ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ವಲಯದ ವಲಯಧ್ಯಕ್ಷರಾದ ಶ್ರೀಮತಿ ಪ್ರಮೀಳಾ ರವರು ವಹಿಸಿದ್ದರು. ಈ ಕಾರ್ಯಕ್ರಮ ದಲ್ಲಿ ಉತ್ತಮ ಪ್ರಗತಿ ಬಂಧು ಸಂಘ, ಉತ್ತಮ ಸ್ವಸಹಾಯ ಸಂಘ, ನವಜೀವನ ಸಮಿತಿ ಸದಸ್ಯರನ್ನು, ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ನಿಕಟ ಪೂರ್ವ ಒಕ್ಕೂಟದ ಅಧ್ಯಕ್ಷರುಗಳನ್ನು ಗುರುತಿಸಲಾಯಿತು. ಬಂದಿರುವ ಅತಿಥಿಗಳನ್ನು ವಲಯ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ ಸ್ವಾಗತಿಸಿ. ಕಾರ್ಯಕ್ರಮವನ್ನು ಚೈತನ್ಯ ಚಂದಪ್ಪ ನಿರೂಪಣೆ ಮಾಡಿ. ಗೋಪಾಲ ಜೋಗಿ ಯವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

LEAVE A REPLY

Please enter your comment!
Please enter your name here