ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ ನವರಾತ್ರಿಯ ದಶಮಿ ದಿನದಂದು ಚಂಡಿಕಾ ಯಾಗ , ಸಮಾರಾಧನೆ ನಡೆಯಿತು.
ಅರ್ಚಕರಾದ ಕೃಷ್ಣಾನಂದ ಭಟ್ ಮಣಿಪಾಲ್ , ಶರತ್ ಭಟ್ ಮಲ್ಪೆ ಧಾರ್ಮಿಕ ಪೂಜಾ ವಿಧಿಗಳನ್ನು ನಡೆಸಿ ಕೊಟ್ಟರು , ದೇವಳದ ಅರ್ಚಕರಾದ ದೀಪಕ್ ಭಟ್ , ದಯಾಘನ್ ಭಟ್ , ವಿನಾಯಕ ಭಟ್ ಹಾಗೂ
ಚಂಡಿಕಾ ಯಾಗದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಕೈಲಾಸನಾಥ್ ಶೆಣೈ ದಂಪತಿಗಳು ಸಹಕರಿಸಿದರು.
ಶ್ರೀದೇವರಿಗೆ ವಿಶೇಷ ಅಲಂಕಾರ , ಸಮೂಹಿಕ ನಮಸ್ಕಾರ , ಪೂರ್ಣಾಹುತಿ , ಮಹಾಪೂಜೆ , ಪಲ್ಲ ಪೂಜೆ , ಸಮಾರಾಧನೆ , ಶ್ರೀ ಶಾರದಾ ದೇವಿಗೆ ಅರ್ಪಿಸಿದ ಸೀರೆಗಳನ್ನು ಏಲಂ ನೆಡೆಸಿ ವಿತರಣೆ ಮಾಡಲಾಯಿತು
ಅಲೆವೂರು ಗಣೇಶ್ ಕಿಣಿ , ಪಿ ವಿ ಶೆಣೈ , ವಸಂತ್ ಕಿಣಿ , ಶಾಂತರಾಮ ಪೈ , ಅಶೋಕ್ ಬಾಳಿಗಾ , ಉಮೇಶ್ ಪೈ , ಆಡಳಿತ ಮಂಡಳಿಯ ಸದಸ್ಯರೂ ಹಾಗೂ
ಜಿ ಎಸ್ ಬಿ ಯುವಕ , / ಮಹಿಳಾ ಮಂಡಳಿಯ ಸದಸ್ಯರು , ಶ್ರೀ ಶಾರದಾ ಮೋಹೋತ್ಸವ ಸಮಿತಿಯ ಪದಾಧಿಕಾರಿಗಳು , ನೂರಾರು ಭಕ್ತರೂ ಉಪಸ್ಥಿತರಿದ್ದರು.

