ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬನ್ನಂಜೆ ಉಡುಪಿ ಕಾರ್ತೀಕ ಮಾಸದ ಸೋಮವಾರ ಶ್ರೀ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥ ವಾಗಿ ರುದ್ರಯಾಗ ನೆಡೆಯಿತು , ದೇವಳದ ತಂತ್ರಿಗಳಾದ ಶಶಿಕಾಂತ್ ತಂತ್ರಿಗಳ ಮಾರ್ಗದರ್ಶನದಲ್ಲಿ ರುದ್ರಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವೃಂದದವರು ನೆಡೆಸಿಕೊಟ್ಟರು ,,,,,

ದೇವರ ಸನ್ನಿಧಿಯಲ್ಲಿ ದೇವಳದ ಅರ್ಚಕರಾದ ವಾಸುದೇವ ಉಪದ್ಯಾಯ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು ,ಶ್ರೀದೇವರಿಗೆ ಪಂಚಾಮೃತಾ ಅಭಿಷೇಕ , ಸೇವಾದಾರರಿಗೆ ಸಂಕಲ್ಪ ವಿಧಿಗಳನ್ನು ನೆಡೆಸಿ ಅಗ್ನಿ ಪ್ರತಿಷ್ಠೆ , ಶತ ರುದ್ರಾಭಿಷೇಶಕ , ನವಕ ಪ್ರಧಾನ , ಭಜನೆ ಕಾರ್ಯಕ್ರ್ರಮ , ಶ್ರೀದೇವರಿಗೆ ವಿಶೇಷ ಅಲಂಕಾರ , ಯಾಗದ ಪುರ್ಣಾಹುತಿ ಬಳಿಕ , ಮಹಾಪೂಜೆ , ಪಲ್ಲಪೂಜೆ ನೆಡೆಯಿತು , ಸಾರ್ವಜನಿಕ ಮಹಾ ಅನ್ನಸಂತರಪಣೆಯಲ್ಲಿ 3 ಸಾವಿರಕ್ಕೊ ಹೆಚ್ಚಿನ ಭಕ್ತರೂ ಭೋಜನಾ ಪ್ರಸಾದ ಸ್ವೀಕರಿಸದರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ ಬನ್ನಂಜೆ , , ನಗರ ಸಭಾ ಸದಸ್ಯರಾದ ಟಿ ಜಿ ಹೆಗ್ದೆ , ಸವಿತಾ ಹರೀಶ್ ರಾಂ , ಸಮಿತಿಯ ಸದಸ್ಯರಾದ ಪ್ರಭಾಕರ್ ಶೆಟ್ಟಿ , ದಿನೇಶ್ ಪುತ್ರನ್ , ಶೇಖರ್ ಶೆಟ್ಟಿ , ಸುದೇಶ್ ಶೇಟ್ , ರಾಜೇಶ್ ಬನ್ನಂಜೆ , ಶಮಿತಾ ಎಸ್ ಭಂಡಾರಿ , ವಿದ್ಯಾಲತಾ ಶೆಟ್ಟಿ , ರವಿರಾಜ್ ಭಟ್ , ಅರುಣ್ ಕುಮಾರ್ , ಹಾಗೂ ಭಜನಾ ಮಂಡಳಿಯ ಸದಸ್ಯರು ನೂರಾರು ಭಕ್ತರೂ ಉಪಸ್ಥರಿದ್ದರು

![SUR_3327[1]](https://tulunaduvarthe.com/wp-content/uploads/2025/10/SUR_33271-696x353.webp)