ಶ್ರೀ ಮಹಾವೀರಕಾಲೇಜು, ಮೂಡುಬಿದಿರೆ: ಯಶಸ್ವೀ ವೃತ್ತಿ ಜೀವನಕ್ಕಾಗಿ ಉದ್ಯೋಗ ಮಾರ್ಗದರ್ಶನ ಅಭಿಯಾನ 2026

0
5

ಶ್ರೀ ಮಹಾವೀರಕಾಲೇಜಿನಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿಗೆಅವಶ್ಯವಿರುವ ವೃತ್ತಿಕೌಶಲ್ಯ ವೃದ್ಧಿಸಲು ನೂತನ ಪರಿಕಲ್ಪನೆ- ಮಹಾವೀರಉದ್ಯೋಗ ಮಾರ್ಗದರ್ಶನಅಭಿಯಾನ 2026ಕಾರ್ಯಕ್ರಮಕ್ಕೆಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಮುಖ್ಯಅತಿಥಿ ಮಣಿಪಾಲ ಅಕಾಡೆಮಿಆಫ್ ಹೈಯರ್‌ಎಜುಕೇಶನ್‌ನ ಕಾನೂನು ವಿಭಾಗದ ಮುಖ್ಯಸ್ಥೆ ಮಿರುಲ್ ಭವಸಾರ್‌ಅವರು ಈ ಕಾರ್ಯಾಗಾರದಉಪಕ್ರಮವನ್ನುಮೆಚ್ಚಿಕೊಂಡು, ಶ್ರೀ ಮಹಾವೀರಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹೆಯ ಕಾನೂನು ವಿಭಾಗದಲ್ಲಿ ಇಂಟರ್ನ್ಶಿಪ್‌ಗೆ ಅವಕಾಶ ನೀಡುವುದಾಗಿ ಘೋಷಿಸಿದರು.
ಈ ಅಭಿಯಾನದ ಮುಖ್ಯರೂವಾರಿ, ಕಾಲೇಜಿನ ಹಳೆವಿದ್ಯಾರ್ಥಿ, ಮತ್ತು ಮೈಂಡ್ ಫುಲ್‌ಕನ್ಸಲ್ಟಿಂಗ್‌ನ ಸ್ಥಾಪಕ ಸಂಜಯ್ ಭಟ್‌ಅವರು ಮಾತನಾಡಿ ವಿದ್ಯಾರ್ಥಿಗಳು ಬಯಸಿದ ಉದ್ಯೋಗ ಹೊಂದಲು ಸಹಾಯಆಗುವಂತೆ ಮಾಹೆ, ಶ್ರೀ ಮಹಾವೀರಕಾಲೇಜು, ಹಳೆ ವಿದ್ಯಾರ್ಥಿಗಳು ಮತ್ತುಉದ್ಯೋಗದಾತರುಜೊತೆಗೂಡಿ ಕೆಲಸ ಮಾಡುತ್ತಿದ್ದಾರೆಎಂದರು.
ಶ್ರೀ ಮಹಾವೀರಕಾಲೇಜುಉದ್ಯೋಗಕೋಶದ ವಿದ್ಯಾರ್ಥಿಸದಸ್ಯರುಕಾಲೇಜಿನಅಪ್ರತಿಮ ಸಾಧನೆಯನ್ನು ವಿವರಿಸಿದರು.
ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷರಾದ ಕೆ.ಅಭಯಚಂದ್ರಜೈನ್‌ಅವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಜೊತೆಗೆಉದ್ಯೋಗ ಮಾರ್ಗದರ್ಶನಕೊಡಲುಶ್ರೀ ಮಹಾವೀರಕಾಲೇಜು ಬದ್ಧಎಂದು ತಿಳಿಸಿದರು.
ಮುಖ್ಯ ಭಾಷಣಗಾರಾದಹೊಲೋಜಿಕ್ ಸಂಸ್ಥೆ, ದಕ್ಷಿಣಏಷ್ಯಇದರ ವ್ಯವಹಾರ ನಿರ್ದೇಶಕರಾದವೆಂಕಟರಾಮನ್ ವಿ.ಅವರು ಮಾತನಾಡಿ, ಉದ್ಯೋಗ ಸಂದರ್ಶನಗಳಿಗೆ ಹೇಗೆ ಸಿದ್ಧರಾಗಬೇಕುಎಂದುವಿವರಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಮಾಹೆ ಮಣಿಪಾಲ, ಸಂವಹನ ಅಧ್ಯಯನ ಸಂಸ್ಥೆಯ (ಎಮ್.ಐ.ಸಿ) ಸಂವಹನ ನಿರ್ವಹಣೆ ವಿಭಾಗದ ಮುಖ್ಯಸ್ಥಡಾ. ಪದ್ಮಕುಮಾರ್ ಕೆ.ಅವರುಎಮ್.ಐ.ಸಿಯ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣಇವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಪನ್ಮೂಲ ವ್ಯಕ್ತಿಗಳು ಮತ್ತು ಈ ಕಾರ್ಯಕ್ರಮದಆಯೋಜನೆಗೆ ಸಹಕರಿಸಿದವರನ್ನು ಅಭಿನಂದಿಸಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕುಹಾಗೂ ಕಳೆದ ವರ್ಷ ಶೇಕಡ 100% ಉದ್ಯೋಗ ವಿದ್ಯಾರ್ಥಿಗಳಿಗೆ ಲಭ್ಯವಾಗಿದೆಅದೇರೀತಿ ಈ ವರ್ಷಕೂಡಶೇಕಡ 100% ಉದ್ಯೋಗನಮ್ಮ ವಿದ್ಯಾರ್ಥಿಗಳಿಗೆ ದೊರಕಲು ಪ್ರಯತ್ನ ನಡೆಯುತ್ತಿದೆಎಂದುತಿಳಿಸಿದರು. ವಿದ್ಯಾರ್ಥಿನಿಯರಾದ ಶ್ರೇಷ್ಠ ಶೆಣೈ ಸ್ವಾಗತಿಸಿ, ಪ್ರತಿಷ್ಠ ನಿರೂಪಿಸಿದರು. ರಕ್ಷಿತಾವಂದಿಸಿದರು.

LEAVE A REPLY

Please enter your comment!
Please enter your name here