ಶ್ರೀ ಮಹಾವೀರ ಕಾಲೇಜಿನಲ್ಲಿ ಗಾಂಧಿ ವಿಚಾರಧಾರೆ ಕುರಿತು ನಡೆದ ಎಸ್.ಡಿ ಸಾಮ್ರಾಜ್ಯ ಸ್ಮಾರಕ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆಯ ಉದ್ಘಾಟಣೆಯನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಡಾ. ಆಶೀರ್ವಾದ್ ಎಂ. ಪಿ, ಶರ‍್ತಾಡಿ ಇವರು ಮಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಈ ಸ್ಪರ್ಧೆಯು ಮಹಾತ್ಮ ಗಾಂಧೀಜಿಯವರ ಚಿಂತನೆಗಳ ಅವಲೋಕನ ಮಾಡಲು ಒಂದು
ಉತ್ತಮ ವೇದಿಕೆಯಾಗಿದೆ, ಇದರಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಗಾಂಧೀಜಿಯವರ ಚಿಂತನೆಗಳನ್ನು ತಿಳಿದುಕೊಂಡು ಅವರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ರೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಾವೀರ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯರ ರು ಗಾಂಧೀಜಿ ಯವರ ಚಿಂತನೆಗಳು ಸದಾಕಾಲ ಪ್ರಸ್ತುತ, ವಿವಿಧ
ದೇಶದ ಗಣ್ಯ ವ್ಯಕ್ತಿಗಳು ಗಾಂಧೀಜಿಯವರ ಆರ‍್ಶಗಳಿಂದ ಹೇಗೆ ಪ್ರಭಾವಿತರಾಗಿದ್ದರು ಎಂಬುದನ್ನು ಉಲ್ಲೇಖಿಸಿದರು. ಗಾಂಧೀಜಿಯವರ ಗ್ರಾಮಸ್ವರಾಜ್ಯ ಪರಿಕಲ್ಪನೆಯ ಪ್ರಾಮುಖ್ಯತೆಗಳನ್ನು ತಿಳಿಸಿ, ವಿದ್ಯಾರ್ಥಿಗಳು ಅವರ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನುಡಿದರು. ಕಾಲೇಜಿನ ಮಾನವಿಕ ಸಂಘ ಮತ್ತು ಅರ್ಥಶಾಸ್ತç ವಿಭಾಗ ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ. ಕೆ. ಅಭಯಚಂದ್ರ ಜೈನ್ಅ ಧ್ಯಕ್ಷತೆ ವಹಿಸಿ, “ಮಹಾತ್ಮ ಗಾಂಧೀಜಿ ಪ್ರಪಂಚ ಕಂಡ ಒರ್ವ ಶ್ರೇಷ್ಠ ವ್ಯಕ್ತಿ, ಅವರು ದೇಶಕ್ಕೆ ನೀಡಿದ ಕೊಡುಗೆ ಅಮೂಲ್ಯವಾದದ್ದು ಮತ್ತು ಸದಾ ನೆನಪಿನಲ್ಲಿಡುವಂತದ್ದು. ಆಗರ್ಭ ಶ್ರೀಮಂತನಾಗಿಹುಟ್ಟಿದ್ದ ಗಾಂಧಿಯವರು ಸರಳವಾಗಿ ಬದುಕಿ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಎಲ್ಲಾ ವಿದ್ಯಾರ್ಥಿಗಳು ಅವರ ಆರ‍್ಶಗಳನ್ನು ಅರಿತು ಸರಳ ಜೀವನದೊಂದಿಗೆ ಉತ್ತಮ ಸಾಧನೆ ಮಾಡಿ ಪ್ರಬುದ್ಧ ನಾಗರಿಕರಾಗಿ ರೂಪುಗೊಳ್ಳಬೇಕೆಂದು” ಹೇಳಿದರು.
ಶ್ರೀ ಮಹಾವೀರ ಪದವಿ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ , ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್,
ಕಾರ್ಯಕ್ರಮದ ಸಂಯೋಜಕಿ ಮತ್ತು ಅರ್ಥಶಾಸ್ತ್ರ ವಿಭಾಗದಮುಖ್ಯಸ್ಥೆ ಗೀತಾ ರಾಮಕೃಷ್ಣ, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ಮಾನವಿಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸಾಕ್ಷಿ ವೇದಿಕೆಯಲ್ಲಿ
ಉಪಸ್ಥಿತರಿದ್ದರು. ೧೫ ಕಾಲೇಜುಗಳ ೨೮ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಸ್ವಾಗತಿಸಿ, ಸಂಯೋಜಕಿ ಗೀತಾ ರಾಮಕೃಷ್ಣ ವಂದಿಸಿದರು, ವಿದ್ಯಾರ್ಥಿನಿ
ಅಶ್ವಿನಿ ನಿರೂಪಿಸಿದರು.