ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆರಾಷ್ಟಿಯ ಏಕತಾ ದಿನ ಆಚರಣೆ

0
16

ಶ್ರೀ ಮಹಾವೀರ ಕಾಲೇಜಿನಲ್ಲಿ ಅಕ್ಟೋಬರ್ 31 ರಂದು ರಾಷ್ಟಿಯ ಏಕತ ದಿನ ವನ್ನು ಆಚರಿಸಲಾಯಿತು. ಈ ದಿನವನ್ನು ಭಾರತದ ಮೊದಲ ಉಪ ಪ್ರಧಾನಮಂತ್ರಿ , ಗೃಹ ಮಂತ್ರಿ
ಮತ್ತು ಲೋಹ ಪುರುಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ
ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ವಹಿಸಿ, ‘ನಮ್ಮ ದೇಶವು ವಿಭಿನ್ನ ಸಂಸ್ಕöÈತಿ, ಭಾಷೆ ಮತ್ತು ಧರ್ಮಗಳನ್ನು ಹೊಂದಿದ್ದರೂ, ಏಕತೆಯಿಂದ ಕೂಡಿದೆ. ಸರ್ದಾರ್ ವಲ್ಲಭಭಾಯ್
ಪಟೇಲ್ ಅವರು ಭಾರತೀಯ ರಾಜ್ಯಗಳನ್ನು ಏಕೀಕರಿಸಿ ನಿಜವಾದ ರಾಷ್ಟç ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳು ರಾಷ್ಟçದ ಭವಿಷ್ಯ, ಅವರಲ್ಲಿ ಏಕತಾ, ಶಿಸ್ತು ಮತ್ತು ದೇಶಭಕ್ತಿ ಬೆಳೆಸುವುದು ನಮ್ಮ ಕರ್ತವ್ಯ. ಇಂದು ನಾವೆಲ್ಲರೂ ಸರ್ದಾರ್ ಪಟೇಲ್ ಅವರ ತ್ಯಾಗ, ಪ್ರಮಾಣಿಕತೆ ಮತ್ತು ನಾಯಕತ್ವವನ್ನು ಸ್ಮರಿಸೋಣ, ರಾಷ್ಟçದ ಏಕತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ
ಹೊಣೆಗಾರಿಕೆ’ ಎಂದು ಮಾತನಾಡಿದರು. ಅನಂತರ ಎಲ್ಲರೂ ಏಕತಾಪ್ರತಿಜ್ಞೆ ಸ್ವೀಕರಿಸಿ, ರಾಷ್ಟçದ ಸಮಗ್ರತೆಯತ್ತ ಬದ್ಧರಾಗುವ ಸಂಕಲ್ಪ ಮಾಡಿದರು. ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫಿû್ಟನೆAಟ್ ವಿಜಯಲಕ್ಷ್ಮೀ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಯುವ ರೆಡ್‌ಕ್ರಾಸ್ ಅಧಿಕಾರಿ ಶ್ರೀಗೌರಿ, ಎನ್‌ಎಸ್‌ಎಸ್ ಅಧಿಕಾರಿ ಶಾರದಾ ಮತ್ತು ರಶ್ಮಿತಾ, ರೇಂಜರ್ಸ್ ಅಧಿಕಾರಿ ಅರುಣಾ ಮತ್ತು ಕವಿತಾ ಹಾಗೂ ರೋವರ್ಸ್ ಅಧಿಕಾರಿ ಸಂದೀಪ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ರಿತಿಕಾ ಪ್ರಥಮ ಬಿ.ಎ ನಿರೂಪಿಸಿದರು.

LEAVE A REPLY

Please enter your comment!
Please enter your name here