ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಉಡುಪಿ 20ನೇ ವಾರ್ಷಿಕೋತ್ಸವದ ಅಂಗವಾಗಿ 23ನೇ ಶ್ರೀ ನಾರಾಯಣಗುರು ಟ್ರೋಫಿ ಓವನ್ ಹಾಗೂ ವಯೋಮಿತಿ ಚೆಸ್ ಸ್ಪರ್ಧೆಯು ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಗೃಹದಲ್ಲಿ ನಡೆಯಿತು.
ಕೇಂಜ ಬ್ರಹ್ಮ ಬೈದರ್ಕಳ ಗರಡಿ ಬಗ್ಗಪೀಠದ ಗಡಿ ಪ್ರಧಾನ ಉಮೇಶ್ ಕೋಟ್ಯಾನ್ ಕಟಪಾಡಿ ದೀಪ ಬೆಳಗಿಸಿ ಮಾತನಾಡಿ, ಚದುರಂಗ ದಾಟ ಬುದ್ದಿ ಮತ್ತಯ ಆಟವಾಗಿದ್ದು, ಆಟಗಾರರು ಜೀವನದ ಪಾಠವನ್ನು ಆರಿಯಲು ಸಾಧ್ಯವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಉಜ್ವಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಆಜಯ್ ಪುರುಷೋತ್ತಮ ಶೆಟ್ಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರಕ್ಟರ್ ಡಾ. ವ್ಯಾಸರಾಜ್ ತಂತ್ರಿ, ಚದುರಂಗದ ಕಾಯಿಯನ್ನು ಮುನ್ನಡೆಸುವ ಮೂಲಕ ಚಾಲನೆಯನ್ನು ನೀಡಿದರು.
ಇಶಾ ಶರ್ಮಾಗೆ ಸನ್ಮಾನ : ಕರ್ನಾಟಕದ ಪ್ರಥಮ ಮಹಿಳಾ ಗ್ಯಾಂಡ್ ಮಾಸ್ಟರ್ ಡಬ್ಲ್ಯುಜಿ ಎಂ. ಇಶಾ ಶರ್ಮಾ ಅವರನ್ನು ಸನ್ಮಾನಿಸಲಾಯಿತು , ವೇದಿಕೆಯಲ್ಲಿ ಮಂಗಳೂರು ಸಾಮ್ರಾಟ್ ಚೆಸ್ ಯುನಿಟ್ ಕಾರ್ಯದರ್ಶಿ ನಾಗೇಶ್ ಕಾರಂತ್, ಉಪುಂದ ಶ್ರೀ ಸಿಧ್ದಿ ವಿನಾಯಕ ಚೆಸ್ ಆಕಾಡೆಮಿ ಸ್ಥಾಪಕ ಬಾಬು ಜೆ.ಪೂಜಾರಿ ಇದ್ದರು. ಫಿಡೇ ಆರ್ಬಿರೇಟರ್ ಮತ್ತು ಕೋಚ್, ಮತ್ತು ಸ್ಥಾಪಕರಾದ ಸಾಕ್ಷಾತ್ ಯು.ಕೆ ಸ್ವಾಗತಿಸಿದರು. ಉಡುಪಿ ಜಿಲ್ಲಾಚೆಸ್ ಅಸೋಸಿಯೇಷನ್ ಅಧ್ಯಕ್ಷ ಉಮಾನಾಥ ಕಾವು ವಂದಿಸಿದರು. ಫಿಡೇ ಅರ್ಬಿ ರೇಟರ್, ಕೋಚ್, ನಿರ್ದೇಶಕಿ ಸೌಂದರ್ಯ ಯು. ಕೆ. ನಿರೂಪಿಸಿದರು. 300ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.


