ಬಜಗೋಳಿ:ಮುಡಾರು ಗ್ರಾಮದ ಹೆಪೆಜಾರು ಶ್ರೀ ಸಿದ್ದಿ ವಿನಾಯಕ ಭಜನಾ ಮಂಡಳಿ ನೆಲ್ಲಿಗುಡ್ಡೆ ಬಜಗೋಳಿ ಇದರ ಪ್ರಥಮ ವರ್ಷದ ಭಜನಾ ಮಂಗಲೋತ್ಸವ ಹಾಗೂ ಸಾರ್ವಜನಿಕ ಶನಿಪೂಜೆ ಯು ನೆಲ್ಲಿಗುಡ್ಡೆ ಗೆಳೆಯರ ಬಳಗದ ಆಶ್ರಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಆಟದ ಮೈದಾನದಲ್ಲಿ ನಡೆಯಿತು.
ಇದರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಡಾರು ಗ್ರಾಮ. ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ ಉದ್ಯಮಿಗಳಾದ ಮಹಾವೀರ್ ಜೈನ್, ಗೆಳೆಯರ ಬಳಗದ ಅಧ್ಯಕ್ಷರಾದ ಸುರೇಶ್ ಸಾಲ್ಯಾನ್, ಕಾಳಿಕಾಂಬಾ ದೇವಸ್ಥಾನ ನೆಕ್ಲಾಜೆ ಇದರ ಮೊಕ್ತೆಸರರಾದ ರಾಮಚಂದ್ರ ಆಚಾರ್ಯ,ಹಿಂದೂ ಮುಖಂಡರಾದ ಸದಾನಂದ ಸಾಲ್ಯಾನ್, ಭಜನಾ ಮಂಡಳಿ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶೈಲೇಶ್ ಸಾಣೂರು, ಭಜನಾ ಮಂಡಳಿ ಅಧ್ಯಕ್ಷೆ ಸುಚಿತ್ರಾ ಶೆಟ್ಟಿ, ಭಜನಾ ಸಂಸ್ಕಾರ ವೇದಿಕೆ ತಾಲೂಕು ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕಿ ಜಯಲಕ್ಷ್ಮೀ ಹೆಗ್ಡೆ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯ.ಡಿ.ಬಂಗೇರ, ಮುಡಾರು ಗ್ರಾಮ ಪಂಚಾಯತ್ ಸದಸ್ಯರಾದ ರೇಖಾ ಎಸ್ ಭಂಡಾರಿ, ಪ್ರಶಾಂತ್ ಕುಮಾರ್ , ರಜತ್ ರಾಮ್ ಮೋಹನ್, ಉಪಸ್ಥಿತ ರಿದ್ದರು.
ಕಾರ್ಯಕ್ರಮ ಕುಮಾರಿ ಸೌಮ್ಯಶ್ರೀ ದೇವಾಡಿಗ ಹಾಗೂ ಕುಮಾರಿ ಪ್ರೀತಿ ನಿರೂಪಣೆ ಮಾಡಿದರು. ಚಂದನ ಆಚಾರ್ಯ ವರದಿ ವಾಚನ ಮಾಡಿದರು. ಕುಮಾರಿ ವಂಶಿ ಸ್ವಾಗತಿಸಿದರು
ದಿನೇಶ್ ಪೂಜಾರಿ ಧನ್ಯವಾದ ಸಲ್ಲಿಸಿದರು.

