ಬೆಳ್ತಂಗಡಿ ತಾಲೂಕು ನಡ ಗ್ರಾಮದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

0
140

ನಡ ಗ್ರಾಮದ ನರಸಿಂಹ ಗಡ ಕ್ಷೇತ್ರದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣದ ಆಮಂತ್ರಣ ಪತ್ರಿಕೆಯನ್ನು ದಿನಾಂಕ 4.05.2025ನೇ ಆದಿತ್ಯವಾರದಂದು ತಾಲೂಕಿನ ಪ್ರಮುಖರಿಗೆ ವಿತರಿಸಲಾಯಿತು. ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಬಹಳ ವಿಜ್ರಂಬಣೆಯಿಂದ ನಡೆಸುವ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು ದಿನಾಕ 3/5/25 ಹಾಗು 4/5/25 ನೇ ಆದಿತ್ಯವಾರದಂದು ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ. ಕಲ್ಯಾಣೋತ್ಸವವು ಮಾನ್ಯ ಶಾಸಕರು ಹಾಗೂ ಕಲ್ಯಾಣೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ಜರುಗಲಿದೆ.

ಈ ಸಂದರ್ಭದಲ್ಲಿ ಕಲ್ಯಾಣೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಶಶಿಧರ್ ಶೆಟ್ಟಿ ಬರೋಡ ಗೌರವ ಅಧ್ಯಕ್ಷರಾದ ಹರೀಶ್ ಪೂಂಜ ಸಮಿತಿಯ ಕೋಶಾಧ್ಯಕ್ಷರುಗಳಾದ ಪುರುಷೋತ್ತಮ ಶೆಣೈ, ಚಂದ್ರಶೇಖರ ಬೋಜಾರ ಉಪಾಧ್ಯಕ್ಷರಾದ ಅಜಿತ್ ಆರಿಗ ಹಾಗೂ ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ, ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ನವೀನ್ ನೆರಿಯ ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here