ಬಂಟ್ವಾಳ : ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಬ್ರಹ್ಮ ಕಲಶೋತ್ಸವದ ವಾರ್ಷಿಕ ದಿನಾಚರಣೆ ಕಾರ್ಯಕ್ರಮ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಫೆಬ್ರವರಿ 26 ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಿಗ್ಗೆ ಪುಣ್ಯಾಹ,ಪಂಚಗವ್ಯ, ಗಣಹೋಮ, ಪವಮಾನ ಸೂಕ್ತಾಭಿಷೇಕ, ನಾಗತಂಬಿಲ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅಶ್ವತ ಕಟ್ಟೆ ಪೂಜೆ, ಭಜನಾ ಸಂಕೀರ್ತನೆ, ಕಾರ್ತಿಕ ಪೂಜೆ, ರಂಗ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಲ್ಪಟ್ಟ ಶುದ್ಧ ನೀರಿನ ಘಟಕ ಹಾಗೂ ಸೋಲಾರ್ ದೀಪ ಉದ್ಘಾಟಿಸಲಾಯಿತು. ಮುಂದಿನ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಾರ್ವಜನಿಕ ಕಾರ್ಯಕ್ರಮದ ಅನುಕೂಲಕ್ಕಾಗಿ ಅಂದಾಜು ಒಂದು ಕೋಟಿ ರೂ.ವೆಚ್ಚದಲಿ ನಿರ್ಮಾಣವಾಗಲಿರುವ ಸಭಾ ಭವನ,ಪಾಕಶಾಲೆ,ಅನ್ನಛತ್ರದ ನಿರ್ಮಾಣ ಕಾರ್ಯಕ್ಕೆ ಭಕ್ತಾದಿಗಳ ಸಹಕಾರ ಯಾಚಿಸಿ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಸುಲೋಚನಾ ಎನ್. ರಾವ್ ಅಂತರರವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದುಷಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ ಭರತಾಂಜಲಿ ಕೊಟ್ಟಾರ ಮಂಗಳೂರು ಇವರಿಂದ ಭರತನಾಟ್ಯ ಮತ್ತು ಜಾನಪದ ಶೈಲಿಯ ನೃತ್ಯಗಳು ಜರಗಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತಾಯ,ಸಮಿತಿ ಸದಸ್ಯರುಗಳಾದ ಎನ್. ಕೆ .ಶಿವ.,ಹರಿ ಪ್ರಸಾದ್ ಭಂಡಾರಿ, ಶ್ರೀನಿವಾಸ ನಾಯ್ಕ್, ಶ್ರೀ ಕೃಷ್ಣ ಭಟ್‌ಅರ್ಚಕರು, ಹರಿಪ್ರಸಾದ್ ಭಂಡಾರಿ ಅಳ್ವರ ಪಾಲು, , ರಾಜೇಶ್ ಪೂಜಾರಿ ಜುಮಾದಿ ಪಾಲು, ಧನಂಜಯ ಶೆಟ್ಟಿ ಪರಾರಿಗುತ್ತು,ಹಾಗೂ ರವೀಂದ್ರ ಕಂಬಳಿ,ದೇವಿ ಪ್ರಸಾದ್ ಪೂಂಜ, ಸುಬ್ರಾಯ ಹೊಳ್ಳ ,ಶಿವರಾಮ ಮಯ್ಯ, ಸುಬ್ರಾಯ ಕಾರಂತ,ನಾರಾಯಣ ಭಟ್,ಧನೇಶ್ವರ ರಾವ್,ಪರಮೇಶ್ವರ, ಕಾವ್ಯಶ್ರೀ ಎಂ. ಮಡಿವಾಳ ಪಡುಪು, ಕವಿತಾ ಆಲಾಡಿ, ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.

