ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು, ಬಂಟ್ವಾಳ: ಕಾನೂನು ಮಾಹಿತಿ ಕಾರ್ಯಕ್ರಮ

0
65

ಬಂಟ್ವಾಳ: ಹಿರಿಯ ನಾಗರೀಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಕಾನೂನಾತ್ಮವಾಗಿ ಅಲ್ಲದೇ ಭಾವನಾತ್ಮಕವಾಗಿಯೂ ಪರಿಹಾರ ಕಂಡುಕೊಳ್ಳಬೇಕು. ಇಂದು ಕೂಡುಕುಟುಂಬಗಳಿಲ್ಲದೇ ಹಿರಿಯ ನಾಗರೀಕರು ಸಮಸ್ಯೆಗಳನ್ನೆದುರಿಸುತ್ತಿದ್ದಾರೆ ಆದ ಕಾರಣ ಯುವಕರು ಇದರ ಕುರಿತು ಜಾಗೃತರಾಗಬೇಕು ಎಂದು ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ. ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಶ್ರೀ ಅನಿಲ್ ಪ್ರಕಾಶ್ ಎಂ.ಪಿ ನುಡಿದರು. ಇವರು ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ, ವಕೀಲರ ಸಂಘ (ರಿ), ಬಂಟ್ವಾಳ, ಪೋಲೀಸ್
ಇಲಾಖೆ, ಬಂಟ್ವಾಳ ಹಾಗೂ ಶ್ರೀ ವೆಂಕಟರಮಣಸ್ವಾಮೀ ಕಾಲೇಜು ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ ಎಸ್.ವಿ.ಎಸ್.ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಸಂವಿಧಾನ ಮತ್ತು ಕಾನೂನನ್ನು ಅರಿಯಬೇಕಾದ ಅಗತ್ಯತೆ ಇದೆ. ಇಂದಿನ ಯುವಕರು ಮುಂದೊಂದು ದಿನ ಹಿರಿಯರಾಗುತ್ತೀರೆಂಬ ಪರಿಜ್ಞಾನದಿಂದ ನಡೆಯಬೇಕು. ಹಿರಿಯರ ಅನುಭವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ವಿಯಾಗಲು ಸಾಧ್ಯ ಎಂದು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಂ.ಡಿ. ಮಂಚಿ ನುಡಿದರು. ‘ಮಾತೃದೇವೋ ಭವ, ಪಿತೃದೇವೋ ಭವ’ ಎಂಬ ತತ್ವಗಳ ಆಚರಣೆ ಕೊರತೆಯಿಂದ ಪೋಷಕರು ಸಮಸ್ಯೆಗಳಿಗೊಳಗಾಗುತ್ತಿದ್ದಾರೆ. ವಿದ್ಯಾಭ್ಯಾಸ ಹೆಚ್ಚಾದಂತೆ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿದೆ. ಪೋಷಕರ ಕಷ್ಟದ ಅರಿವಾಗುವುದು ಪೋಷಕರಾದಾಗಲೇ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಿರಿಯ ನ್ಯಾಯವಾದಿಗಳಾದ ಗಣೇಶ್ ಪೈ ಬಿ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕಬ್ಬಿಣದ ಕಡಲೆ ಎಂದುಕೊAಡಿರುವ ಕಾನೂನನ್ನು ವಿದ್ಯಾರ್ಥಿ ಹಂತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ತಿಳಿಯಲು ಸಾಧ್ಯ. ಇಂದಿನ ಯುವಕರು ಪೋಷಕರು ಮತ್ತು ಶಿಕ್ಷಕರ ನಿಯಂತ್ರಣ ಮೀರಿದಾಗ ಆರಕ್ಷಕರು ಪ್ರವೇಶ ಪಡೆಯುತ್ತಾರೆ. ಕಾನೂನಿನ ಅರಿವಿಲ್ಲ ಎಂದು ಹೇಳದೇ ತಿಳಿದುಕೊಳ್ಳಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬಂಟ್ವಾಳ ನಗರ ಪೋಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಅನಂತ ಪದ್ಮನಾಭ ಸಭೆಗೆ
ತಿಳಿಸಿದರು.
ವೇದಿಕೆಯಲ್ಲಿ ಬಂಟ್ವಾಳ ವಕೀಲರ ಸಂಘದ ಕಾರ್ಯದರ್ಶಿಗಳಾದ ನರೇಂದ್ರನಾಥ್ ಭಂಡಾರಿ ಉಪಸ್ಥಿತರಿದ್ದರು. ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ ಸ್ವಾಗತಿಸಿ, ಎಸ್.ವಿ.ಎಸ್. ಕಾಲೇಜಿನ ಸಸ್ಯಶಾಸ್ತç ವಿಭಾಗದ ಮುಖ್ಯಸ್ಥರು ಹಾಗೂ ಇ.ಎಲ್.ಸಿ.
ಸಂಯೋಜಕರಾದ ಡಾ.ವಿನಾಯಕ ಕೆ.ಎಸ್. ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಕಾಶೀನಾಥ ಶಾಸ್ತ್ರೀ ಹೆಚ್.ವಿ. ನಿರೂಪಿಸಿ
ಕು.ಪೃಥ್ವಿ ಮತ್ತು ತಂಡದವರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here