ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ವಿದ್ಯಾಗಿರಿ ಬಂಟ್ವಾಳ: ಸ್ವಾತಂತ್ರ್ಯ ದಿನಾಚರಣೆ

0
238

ಬಂಟ್ವಾಳ: ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯು ಅತೀ ರೋಚಕವಾದುದು. ಲಕ್ಷಾಂತರ ಜನರು ಚಳುವಳಿಯಲ್ಲಿ ಧುಮುಕಿ ಹುತಾತ್ಮರಾಗಿದ್ದಾರೆ. ಈಗ ಇದು ಇತಿಹಾಸ. ಆ ಚಳವಳಿಯ ಕುರಿತು ನಾವೆಲ್ಲ ಮನನ ಮಾಡಿಕೊಳ್ಳಬೇಕು. ಯುವಜನತೆ ದೇಶಾಭಿಮಾನ ಹೊಂದುವುದರೊಂದಿಗೆ ಇತರರಿಗೂ ದೇಶಸೇವೆಗೆ ಪ್ರೇರೇಪಿಸಬೇಕು ಎಂದು ಸಿ.ಆರ್.ಪಿ.ಎಫ್ ನಿವೃತ್ತ ಆಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ರವಿ ಪೂಜಾರಿ ಹೇಳಿದರು.

ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.
ಎಸ್ ವಿ ಎಸ್ ಪದವಿ ಕಾಲೇಜು ಪ್ರಾಂಶುಪಾಲ ಎಂ.ಡಿ.ಮಂಚಿ , ಎನ್‌ಸಿಸಿ ಅಧಿಕಾರಿ ಹಾಗೂ ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿದರು. ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ. ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಶಶಿಧರ್ ಎಸ್ ವಂದಿಸಿ, ಡಾ. ಕಾಶೀನಾಥ ಶಾಸ್ತಿç ಹೆಚ್.ವಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here