ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ವಿದ್ಯಾಗಿರಿ, ಬಂಟ್ವಾಳ : ‘ಸ್ಯಾಪ್’ ಕಲಿಕೆ ಮತ್ತು ಅನುಷ್ಠಾನ ಕಾರ್ಯಾಗಾರ

0
70


ಬಂಟ್ವಾಳ: ವಿದ್ಯಾರ್ಥಿಗಳು ಪಠ್ಯಕ್ರಮದೊಂದಿಗೆ ವಿವಿಧ ಕೌಶಲಗಳನ್ನು ಕಲಿತರೆ ಉದ್ಯೋಗಗಳಿಸುವುದು ಸುಲಭವಾಗುವುದು. ಅಧ್ಯಯನದಜೊತೆಜೊತೆಗೆ ವಿವಿಧ ಕೌಶಲಗಳ ತರಬೇತಿ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿದೆ ಎಂದು ಶ್ರೀ ವೆಂಕಟರಮಣ ಸ್ವಾಮೀಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿ ನುಡಿದರು. ಇವರು ಕಾಲೇಜಿನ ಐ.ಐ.ಸಿ. ಹಾಗೂ ಬಿ.ಸಿ.ಎ. ವಿಭಾಗದ ಸಹಯೋಗದಲ್ಲಿ ನಡೆದ ‘ಸ್ಯಾಪ್ ಲರ್ನಿಂಗ್‌ ಅಂಡ್‌ ಇಂಪ್ಲಿಮೆಂಟೇಶನ್’ ಎಂಬ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಯಾಪ್‌ಎಡ್ಜ್ಲರ್ನಿಂಗ್‌ ಸಂಸ್ಥೆಯ ಕ್ಯಾರಿಯರ್‌ ಕೌನ್ಸಿಲರ್‌ ಅರುಣ್ ಶಿವ ಸಾಲಿಯಾನ್, ಹಾಗೂ ಸ್ಯಾಪ್‌ಕನ್ಸಲ್ಟೆಂಟ್ ಬ್ರಿಯಾನ್‌ ಜಾಸನ್‌ ಡಾಲ್ಮೀಡಿಯಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದರು.ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿಗಳಾದ ಶಿವಣ್ಣಪ್ರಭು ಉಪಸ್ಥಿತರಿದ್ದರು.ಐ.ಐ.ಸಿ. ಸಂಯೋಜಕರು ಹಾಗೂ ಬಿ.ಸಿ.ಎ. ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸಹನಾ ಸ್ವಾಗತಿಸಿ, ಪ್ರಾಧ್ಯಾಪಕರಾದ ಶ್ರೀಮತಿ ಧನುಶ್ರೀ ವಂದಿಸಿದರು.

LEAVE A REPLY

Please enter your comment!
Please enter your name here