ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ಮೀಡಿಯA ಶಾಲೆ ವಿದ್ಯಾಗಿರಿ ಬಂಟ್ವಾಳ,ಎನ್.ಸಿ.ಸಿ ನೌಕಾದಳ ಘಟಕದ ಉದ್ಘಾಟನಾ

0
24

ದಿನಾAಕ 31.10.2025 ರಂದು ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾಗಿರಿ ಬಂಟ್ವಾಳ, ಇಲ್ಲಿ ಎನ್.ಸಿ.ಸಿ ನೌಕಾದಳ ಘಟಕದ ಉದ್ಘಾಟನಾ ಸಮಾರಂಭವು
ನಡೆಯಿತು. 5 ಏಂಖ ನೌಕದಳ ಘಟಕದ ಎನ್.ಸಿ.ಸಿ ಮಂಗಳೂರು ಇಲ್ಲಿನ ಕಮಾಂಡಿAಗ್ ಅಧಿಕಾರಿ ಸಿಡಿಆರ್ ಲಿಬಿನ್ ಆರ್ ಜಾನ್‌ಸಾನ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ನೌಕಾದಳ ಘಟಕದ ಧ್ವಜವನ್ನು ಅನಾವರಣಗೊಳಿಸುವುದರೊಂದಿಗೆ ಅಧಿಕೃತವಾಗಿ ಉದ್ಘಾಟಿಸಿದರು. ಇವರು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಶೌರ್ಯವನ್ನು ಬೆಳೆಸುವಲ್ಲಿ
ನೌಕಾದಳ ಘಟಕದ ಪಾತ್ರವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘ (ರಿ) ವಿದ್ಯಾಗಿರಿ, ಬಂಟ್ವಾಳ
ಇದರ ಜೊತೆ ಕಾರ್ಯದರ್ಶಿಗಳಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ರವರು ಬಂಟ್ವಾಳ ತಾಲೂಕಿನಲ್ಲಿ ಎನ್.ಸಿ.ಸಿ ಘಟಕ ನಡೆಸಲು ಅವಕಾಶ ಪಡೆದ ಮೊದಲ ಶಾಲೆ ಎಂಬ ಕೀರ್ತಿಯನ್ನು ಈ
ಶಾಲೆ ಪಡೆದಿದೆ ಎನ್ನುತ್ತ ಇದಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶುಭಹಾರೈಸಿ, ಘಟಕಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಹರಿಪ್ರಸಾದ್‌ರವರು ಶಾಲೆಯಲ್ಲಿ ನೌಕಾದಳ ಘಟಕ ಆರಂಭದ ಮೂಲಕ ವಿದ್ಯಾರ್ಥಿಗಳಿಗೆ ರಾಷ್ಟ ಸೇವೆಗೆ ಹೊಸ ವೇದಿಕೆ ಸಿಕ್ಕಿದೆ ಎಂದು ಸAತೋಷ ವ್ಯಕ್ತ ಪಡಿಸಿದರು. ಬಿ.ಆರ್.ಎಂ.ಪಿ
ಶಾಲೆಯ ಪ್ರಾಂಶುಪಾಲರು ಶ್ರೀಮತಿ ಪೂರ್ಣೇಶ್ವರಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೋಸಲ್ ಡಿಸೋಜಾ ನಿರೂಪಿಸಿ, ಕು| ದೃಶ್ಯ ಸ್ವಾಗತಿಸಿ, ಸಿಟಿಒ ಆಗಿರುವ ರತ್ನಾಕರ್ ವಂದಿಸಿದರು.

LEAVE A REPLY

Please enter your comment!
Please enter your name here