ಶ್ರೀ ವೆಂಕಟರಮಣ ಸ್ವಾಮೀ ಇಂಗ್ಲೀಷ್ ಮೀಡಿಯಂ ಶಾಲೆ, ವಿದ್ಯಾಗಿರಿ, ಬಂಟ್ವಾಳ : ಶಾಲಾ ವಾರ್ಷಿಕೋತ್ಸವ

0
35


ಬಂಟ್ವಾಳ: ವಿದ್ಯಾರ್ಥಿಗಳು ಯೋಜನಾಬದ್ಧವಾಗಿಅಧ್ಯಯನ ಮಾಡಿದರೆತಮ್ಮ ಪಠ್ಯದೊಂದಿಗೆ ಸಂಗೀತ, ಅಭಿನಯ, ಕ್ರೀಡೆಇತ್ಯಾದಿ ವಿವಿಧ ಕಲೆಗಳಲ್ಲಿಯೂ ಮುಂದುವರೆಯುವುದು ಸಾಧ್ಯವಾಗುತ್ತದೆ. ಮಕ್ಕಳಿಗೆ ಮೊಬೈಲ್ ಬಳಕೆಯ ಗೀಳು ಹೆಚ್ಚುತ್ತಿದ್ದುಇದಕ್ಕೆ ಪೋಷಕರೂಒಂದುರೀತಿಯಲ್ಲಿಕಾರಣರಾಗುತ್ತಿದ್ದಾರೆಎAದು ನಿವೃತ್ತಗಣಿತಶಾಸ್ತç ಪ್ರಾಧ್ಯಾಪಕ ಪ್ರೊ.ಟಿ.ಪ್ರಕಾಶ್ ಪ್ರಭು ನುಡಿದರು.
ಇವರು ಬಂಟ್ವಾಳ ವಿದ್ಯಾಗಿರಿಯಶ್ರೀ ವೆಂಕಟರಮಣಸ್ವಾಮೀಇAಗ್ಲೀಷ್ ಮೀಡಿಯಂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರಾಥಮಿಕ ಹಂತದಲ್ಲಿ ಓದಿನಲ್ಲಿ ಮುಂದಿರುವ ಕೆಲವು ವಿದ್ಯಾರ್ಥಿಗಳು ಉನ್ನತಅಧ್ಯಯನದ ಸಂದರ್ಭಗಳಲ್ಲಿ ಹಿಂದುಳಿಯುತ್ತಿದ್ದಾರೆ.ಅದಕ್ಕೆಅವರಲ್ಲಿತಾರ್ಕಿಕಜ್ಞಾನದಕೊರತೆಕಡಿಮೆಯಾಗುತ್ತಿರುವುದೇಕಾರಣಎAದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಎಸ್.ವಿ.ಎಸ್.ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕಿ ಶ್ರೀಮತಿ ಕೆ ರೇಖಾ ಶೆಣೈಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಶ್ರೀ ಹರಿಪ್ರಸಾದ್ ಶಾಲಾ ವಾರ್ಷಿಕವರದಿ ವಾಚಿಸಿದರು.ಶ್ರೀಮತಿ ಶರ್ಮಿಳಾ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ಗೌತಮಿ ಬಹುಮಾನ ವಿತರಣಾಕಾರ್ಯಕ್ರಮ ನಡೆಸಿಕೊಟ್ಟರು.ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಚೈತ್ರಾ ಶೆಟ್ಟಿ ಸ್ವಾಗತಿಸಿ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ವೀಣಾದೇವಾಡಿಗ ವಂದಿಸಿದರು.ವೇದಿಕೆಯಲ್ಲಿ ವಿದ್ಯಾರ್ಥಿನಾಯಕತನೀಶ್‌ಆರ್ ಶೆಟ್ಟಿಗಾರ್ ಉಪಸ್ಥಿತರಿದ್ದರು.ಶಾನ್ ಸಜಿತ್ ಹಾಗೂ ಅನನ್ಯ ಪಿ ಭಟ್ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

LEAVE A REPLY

Please enter your comment!
Please enter your name here