ಶ್ರೀ ವೆಂಕಟರಮಣಸ್ವಾಮೀ ಕಾಲೇಜು ಬಂಟ್ವಾಳ: ಶಿಕ್ಷಕರ ದಿನಾಚರಣೆ

0
175

ಬಂಟ್ವಾಳ: ವಿದ್ಯಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಗುರುವಿನ ಮಾರ್ಗದರ್ಶನವಿಲ್ಲದೇ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಸಮಾಜದ ಯಾವುದೇ ವೃತ್ತಿಯಲ್ಲಿರುವವರೂ ಕೂಡ ಶಿಕ್ಷಕರ ಸಹಕಾರದಿಂದ ಬಂದವರಾಗಿದ್ದಾರೆ ಎಂದು ಶ್ರೀ ವೆಂಕಟರಮಣಸ್ವಾಮೀ ಪದವಿಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿ ಹೇಳಿದರು.

ಇವರುಶ್ರೀ ವೆಂಕಟರಮಣಸ್ವಾಮೀ ಪದವಿ ಹಾಗೂ ಪದವಿ ಪೂರ್ವಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ವಿ.ಎಸ್. ಪಿ.ಯು ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ., ಉಪನ್ಯಾಸಕರಾದ ಅಖಿಲಾ ಪೈ, ಶಶಿಧರ್, ಡಾ. ಕಾಶೀನಾಥ ಶಾಸ್ತ್ರಿ ಹೆಚ್.ವಿ. ಇದ್ದರು. ವಿದ್ಯಾರ್ಥಿಗಳಾದ ಪ್ರಜ್ವಲ್ ಪ್ರಭು ಸ್ವಾಗತಿಸಿ, ಕು. ಪ್ರತೀಕ ತಂಡದವರು ಪ್ರಾರ್ಥಿಸಿದರು. ರಕ್ಷಿತ್‌ ಆರ್ ಶೆಟ್ಟಿ ನಿರೂಪಿಸಿ, ಶಾರದಾ ಶಿವಪ್ಪ ಮಾದರ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here