ಬಂಟ್ವಾಳ: ಕ್ರೀಡೆ ಮನುಷ್ಯನಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವುದರೊಂದಿಗೆ ಶಾರೀರಿಕ ಹಾಗೂ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಶಾಲಾ ಶಿಕ್ಷಣದಲ್ಲಿ ಓದಿನೊಂದಿಗೆ ಕ್ರೀಡೆಗೆ ಪ್ರಾಮುಖ್ಯತೆ ನೀಡಿದಲ್ಲಿ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ.ಅಧ್ಯಯನಕ್ಕೆಕೊಡುವಷ್ಟೇ ಮಹತ್ವವನ್ನುಕ್ರೀಡೆಗೆ ನೀಡಬೇಕುಎಂದುಅಭಿಮತ ವಾಹಿನಿಯ ಪಾಲುದಾರರಾದಡಾ.ಮಮತಾ ಪಿ ಶೆಟ್ಟಿ ನುಡಿದರು.ಇವರು ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ನಡೆದಮೂರುದಿನಗಳ ವಾರ್ಷಿಕಕ್ರೀಡಾಕೂಟವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಯ ಸಂಚಾಲಕಿ ಶ್ರೀಮತಿ ಕೆ ರೇಖಾಶೆಣೈ ವಹಿಸಿದ್ದರು.ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮAಚಿವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ವೆಂಕಟರಮಣಸ್ವಾಮಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ ಅತಿಥಿಗಳನ್ನು ಪರಿಚಯಿಸಿದರು.ಬಿ.ಆರ್.ಎಂ.ಪಿ.ಸಿ. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪೂರ್ಣೇಶ್ವರಿ ಭಟ್ ಸ್ವಾಗತಿಸಿ, ಎಸ್.ವಿ.ಎಸ್. ಇಂಗ್ಲೀಷ್ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ವಂದಿಸಿದರು. ದೈಹಿಕ ಶಿಕ್ಷಕಿ ಪ್ರತೀಕ್ಷಾಕ್ರೀಡಾದಿನದ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದಅನನ್ಯಾತಂಡದವರು ಪ್ರಾರ್ಥಿಸಿದರು.ಕಾರ್ಯಕ್ರಮದಆರಂಭದಲ್ಲಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ ನೆರವೇರಿತು. ಸಮೂಹ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಕರಾದ ರಾಜೇಶ್‌ಕುಮಾರ್ ಕೆ ಹಾಗೂ ಬಸವರಾಜ ಹನುಮಂತಕಾAಬ್ಳೆರವರು ಕ್ರೀಡಾಚಟುವಟಿಕೆಗಳನ್ನು ನೆರವೇರಿಸಿದರು.

