ವರದಿ :ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ
ತುಳುನಾಡು ÷ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ, ಗುಂಡ್ಯಡ್ಕ, ಅಂಚೆ : ಬಾನಂಗಡಿ – 574274, ದ.ಕ. ಇಲ್ಲಿ ಆಚರಿಸಲ್ಪಡುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದೇವಸ್ಥಾನದ ಆವರಣದಲ್ಲಿ ಗಿರಿಧರ ಭಟ್ ರಾಧಾಕೃಷ್ಣ ದೇವಸ್ಥಾನ ಮಂಗಳೂರು ಇವರು ಶಾಸ್ತ್ರೋಕ್ತವಾಗಿ ಬಿಡುಗಡೆ ಮಾಡಿದರು.ದಿನಾಂಕ 04-01-2026ನೇ ರವಿವಾರ ಸೂರ್ಯೋದಯದಿಂದ ದಿನಾಂಕ 11-01-2026ನೇ ರವಿವಾರ ಸೂರ್ಯೋದಯದ ತನಕಶ್ರೀ ವಿಠೋಬ ರುಕುಮಾಯಿ ಭಜನ ಮಂಡಳಿಯ ವಜ್ರಮಹೋತ್ಸವದ ಪ್ರಯುಕ್ತ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪೂರ್ಣಾನುಗ್ರಹ ಪೂರ್ವಕ ಲೋಕಕಲ್ಯಾಣಾರ್ಥವಾಗಿಅಖಂಡ ಭಜನ ಸಪ್ತಾಹವನ್ನು ಗುಂಡ್ಯಡ್ಕ ಶ್ರೀನಿವಾಸಪುರದ ಶ್ರೀ ವಿಠೋಬ ರುಕುಮಾಯಿ ದೇವರ ಸನ್ನಿಧಿಯಲ್ಲಿ ನೆರವೇರಿಸುವುದಾಗಿ ನಿಶ್ಚಯಿಸಿದ್ದುದಿನಾಂಕ 4.01.2026 ರಂದು ಗಣಪತಿ ಹವನ ಗುರುದೇವತಾ ಪ್ರಾರ್ಥನೆ ಬಳಿಕ ವೇದಮೂರ್ತಿ ಎಂ ಕೇಶವ ಭಟ್ ಶ್ರೀ ರಾಧಾಕೃಷ್ಣ ದೇವಸ್ಥಾನ ಮಂಗಳೂರು ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಲಿದ್ದು ದಿನಾಂಕ 11.01.2026 ಆದಿತ್ಯವಾರ ಬೆಳಗ್ಗೆ ಏಳು ಗಂಟೆಗೆ ಭಜನಾ ಮಂಗಲ ನಡೆಯಲಿದೆ

ಆ ಪ್ರಯುಕ್ತ ಈ ಮಹತ್ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ತನು-ಮನ-ಧನಪೂರ್ವಕ ಸಹಕಲಿಸಿ ಶ್ರೀ ವಿಠೋಬ ರುಕುಮಾಯಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಮಂತ್ರಣ ಪತ್ರದಲ್ಲಿರಾಮಚಂದ್ರ ಭಟ್ನಾಟೇಕರ್ಗರವಾಧ್ಯಕ್ಷರು(ಅಧ್ಯಕ್ಷರು, ಕ. ಬ್ರಾ, ಸ. ಸುಧಾರಕ ಸಂಘ) ಪಾಂಡುರಂಗ ಸಪ್ರೆ ಅಧ್ಯಕ್ಷರು ದೇವಸ್ಥಾನ ಆಡಳಿತ ಮಂಡಳಿಪಿ. ರಮೇಶ ಭಟ್ ಪರಾಡ್ಕರ್ಕಾರ್ಯದರ್ಶಿ ದೇವಸ್ಥಾನ ಆಡಳಿತ ಮಂಡಳಿಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಶ್ರೀ ವಿಠೋಬ ಭಜನ ಮಂಡಳಿ ಟ್ರಸ್ಟ್ (ರಿ.), ಶ್ರೀನಿವಾಸಪುರ ಹಾಗೂ ಊರ ಹತ್ತು ಸಮಸ್ತರು ಆಮಂತ್ರಣ ಪತ್ರದಲ್ಲಿ ತಿಳಿಸಿದ್ದಾರೆ.
ಈ ಅಪೂರ್ವ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ದಿನಾಂಕ 28.12.2025 ನೇ ರವಿವಾರ ಅಪರಾನ್ನ 3:30 ರಿಂದ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ವಿಶೇಷ ನಗರ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರು ಭಗವದ್ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಮಂತ್ರಣ ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ.
=======

