ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಶ್ರೀಧರ ಅಮೀನ್ ಮಣಿಪುರ ಪುನರ್ ಆಯ್ಕೆ

0
1

ಉಡುಪಿ: ಅ.30 ರಂದು ಗುರುವಾರ ಬೆಂಗಳೂರು ನಗರದ ಈಡಿಗ ಸಂಘದ ಹಾಸ್ಟೆಲ್ ಹತ್ತಿರದಲ್ಲಿರುವ ದಿ. ಗ್ರೀನ್ ಪಾತ್ ಹೋಟೆಲ್‌ನಲ್ಲಿ ಈಡಿಗ, ಬಿಲ್ಲವ ಸೇರಿದ ಎಲ್ಲಾ ಪಂಗಡಗಳ ಸದಸ್ಯರನ್ನು ಒಳಗೊಂಡ ಬಿ.ಎಸ್.ಎನ್.ಡಿ.ಪಿ ಸಂಘಟನೆಯ ರಾಜ್ಯಮಟ್ಟದ ಸಭೆ ನಡೆದಿದ್ದು ಸಭೆಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದು ಜಿಲ್ಲಾವಾರು ಘಟಕಗಳ ಜವಾಬ್ದಾರಿಯನ್ನು ಘೋಷಣೆ ಮಾಡಿರುತ್ತಾರೆ. ಉಡುಪಿ ಜಿಲ್ಲಾ ಘಟಕದ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ಶ್ರೀಧರ್ ಅಮೀನ್ ಮಣಿಪುರ ಇವರನ್ನು ಸರ್ವಾನುಮತದಿಂದ ಪುನರ್ ಆಯ್ಕೆ ಮಾಡಲಾಯಿತು.

ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮ ಜೀವನವನ್ನು ಅಳವಡಿಸಿಕೊಂಡಿದ್ದು, ಅಲ್ಲದೆ ಬಿಲ್ಲವ ಸಮಾಜದ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜದಲ್ಲಿ ಮತ್ತಷ್ಟು ಅಭಿವೃದ್ಧಿಯ ಕೆಲಸ ಮಾಡುವಂತೆ ಸಂಘ ಜವಾಬ್ದಾರಿ ವಹಿಸಿಕೊಟ್ಟಿದೆ.

LEAVE A REPLY

Please enter your comment!
Please enter your name here