1956 ರಲ್ಲಿ ಮೊದಲ ಭಾರತೀಯ ಒಲಂಪಿಕ್ ಈಜುಪಟು ದಿವಂಗತ ಶ್ರೀ ಮಹಬೂಬ್ ಶಂಶೇರ್ ಖಾನ್ ಇವರ ಸವಿ ನೆನಪಿಗಾಗಿ ಮಾಸ್ಟರ್ ಅಕ್ವಾಟಿಕ್ ಫಡೋರೇಶನ್ ಆಫ್ ಇಂಡಿಯಾದ ಸಹಯೋಗದಲ್ಲಿ
“ನ್ಯಾಷನಲ್ ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್ಶಿಪ್ 2025” ಮಂಗಳಗಿರಿ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ ಇಲ್ಲಿ ದಿನಾಂಕ 11/ 10/ 2025 ರಂದು ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ ರವರು ಶ್ಲಾಘನೀಯ ಪ್ರದರ್ಶನವನ್ನು ನೀಡುವುದರೊಂದಿಗೆ ತಾವು ಭಾಗವಹಿಸಿದ ಐದು ಸ್ಪರ್ಧೆಗಳಾದ 200ಮೀ. ಫ್ರೀ ಸ್ಟೈಲ್ , 100ಮೀ. ರಿಲೇ(ವೈಯಕ್ತಿಕ) 50ಮೀ.ಬಟರ್ ಫ್ಲೈ,
50ಮೀ. ಬ್ರೆಸ್ಟ್ ಸ್ಟ್ರೋಕ್, ಕರ್ನಾಟಕ ತಂಡದ Midly ರಿಲೇ ಯಲ್ಲಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.
ಇವರು ವಿಟ್ಲ ಕೋಟಿಕೆರೆ ಗೋಪಾಲ ಸಪಲ್ಯ ಹಾಗೂ ಲೀಲಾವತಿ ದಂಪತಿಯ ಕಿರಿಯ ಪುತ್ರಿಯಾಗಿದ್ದು ಈಜುವನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಅತ್ಯುತ್ತಮ ಈಜುತರಬೇತುಗಾರ್ತಿಯಾಗಿ ದ್ದಾರೆ.