ಕಾರ್ಕಳ : ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಬಿ ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನ ಕಾರ್ಕಳ ಇವರ ಸಹಯೋಗದಲ್ಲಿ ಸಾರ್ವಜನಿಕ ಗೀತಾ ಜಯಂತಿ ಆಚರಣೆ ಅಂಗವಾಗಿ ಕಾರ್ಕಳದ ಶ್ರೀ ಶಾರದಾ ಮಂಜುನಾಥ ಪೈ ಸಭಾಭವನದಲ್ಲಿ ಒಂದು ವಾರಗಳವರೆಗೆ ಪ್ರತೀ ನಿತ್ಯವೂ ಸಂಧ್ಯಾ ಸಮಯದಲ್ಲಿ ಶ್ರೀಮದ್ ಭಗವದ್ಗೀತಾ ಪ್ರವಚನ ನಡೆಯಿತು.
ಗೀತಾ ಪ್ರವಚನಕಾರರಾಗಿ ಡಾ. ವಿನಾಯಕ ಭಟ್ಟ ಗಾಳಿಮನೆ ಮುನಿರಾಜ ರೆಂಜಾಳ ಶಂಕರ ನಾರಾಯಣ ಭಟ್ ಅನಂತ ಪದ್ಮನಾಭ ಭಟ್ ಸುಮಂತ ಜೋಷಿ ಸುದರ್ಶನ ಸಾಮಗರು ಆಗಮಿಸಿ ಪ್ರವಚನ ನೀಡಿದರು. ಪ್ರತೀ ದಿನವೂ ಆರಂಭದಲ್ಲಿ ಶ್ರೀಕೃಷ್ಣನಿಗೆ ದೀಪ ಬೆಳಗಿ ಪ್ರವಚನ ಮುಂದುವರಿದು ಕೊನೆಯಲ್ಲಿ ಶ್ರೀಕೃಷ್ಣ ಪ್ರಸಾದ ವಿತರಿಸಲಾಯಿತು. ಪ್ರಸಾದ ರೂಪಕ್ಕೆ ಭಕ್ತಿ ಮಹನೀಯರು ಹಣ್ಣುಹಂಪಲು ನೀಡಿ ಸಹಕರಿಸಿದರು. ಪುಣ್ಯ ಗೀತಾ ಶ್ರವಣದಲ್ಲಿ ನೂರಾರು ಮಂದಿ ಸದ್ಭಕ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮವು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಗೌರವಾಧ್ಯಕ್ಷ ಟಿ ರಾಮಚಂದ್ರ ನಾಯ್ಕ್, ಅಧ್ಯಕ್ಷ ಟಿ ಎನ್ ಮಾನ್ಯ ಕಾರ್ಯದರ್ಶಿ ನವೀನ್ ಪೈ ಸಹಕಾರದಲ್ಲಿ ನಡೆಯಿತು. ಗೀತಾ ಅಭಿಯಾನ ಸಂಘಟಕ ಸಂಜಯ ಕುಮಾರ್ ಸಂಯೋಜಿಸಿದರು.

