ವರದಿ ರಾಯಿ ರಾಜ ಕುಮಾರ
ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಭೇಟಿ ಇತ್ತ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿಯವರು ಶಾಲೆಯ ಅಭಿವೃದ್ಧಿಗಾಗಿ ರೂ. 10 ಲಕ್ಷ ದೇಣಿಗೆಯನ್ನು ನೀಡಿದರು. ವಿದ್ಯಾಲಯದ ಎಲ್ಲರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ವಿದ್ಯಾ ದೇಗುಲದ ಮೂಲ ಧನವಾಗಿ ಈ ಹಣವನ್ನು ಉಪಯೋಗಿಸಬೇಕೆಂದು ವಿದ್ಯಾಲಯದ ಮುಖ್ಯಸ್ಥರಾದ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
.