ಕೋಟೆಕಾರು ಶಂಕರ ಮಠದಲ್ಲಿ ಶೃಂಗೇರಿ ಶ್ರೀಗಳ ವರ್ಧಂತ್ಯುತ್ಸವ

0
28

ಕೋಟೆಕಾರು: ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠಾಧೀಶ ಜಗದ್ಗುರು ವಿಧುಶೇಖರ ಭಾರತಿ ಸನ್ನಿಧಾನಂಗಳರ 33ನೇ ವರ್ಧಂತ್ಯುತ್ಸವ ಜುಲೈ 29ರಂದು ಕೋಟೆಕಾರು ಶಂಕರ ಮಠದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ ವಿವಿಧ ಹೋಮ ಹವಾನಗಳು ನಡೆದು ಸಂಜೆ ಗಂಟೆ 5:00 ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಹಿರಿಯ ನ್ಯಾಯವಾದಿ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಗದ್ಗುರುಗಳ ಅಭಿವಂದನ ಸಮರ್ಪಣೆಯನ್ನು ಪ್ರೊ. ಶಿವಾಜಿ ಅಧಿಕಾರಿಗಳು ಸಮರ್ಪಿಸಲಿದ್ದಾರೆ. ಪ್ರಧಾನ ಅಭ್ಯಾಗತರಾಗಿ ಸೀತಾರಾಮ ಕೊಪ್ಪಲು, ನೆಲ್ಲಿಸ್ಥಳದ ಸುಂದರ ಆಚಾರ್ಯ, ಉಳ್ಳಾಲದ ಸುಂದರ ಉಳಿಯ, ಸತ್ಯನಾರಾಯಣ ಹೂಡೆ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಂಗಳೂರು ಎ.ಆರ್ ಪ್ರಭಾಕರ್, ಬಂಟ್ವಾಳ ಮೂಡಂಕಾಪಿನ ಪಿ ಎನ್ ನಾಗೇಶ್, ಮಂಗಳೂರಿನ ಸಿ ಎಚ್ ಮುರಳಿಧರ್, ಮೋಹನ್ ರಾವ್ ಭೋಂಸ್ಲೆ, ಮುಲ್ಕಿಯ ದಾಮೋದರ ಆಚಾರ್ಯರಗಳನ್ನು ಸನ್ಮಾನಿಸಲಾಗುವುದು ಎಂದು ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ತಿಳಿಸಿರುತ್ತಾರೆ. ಗಂಟೆ 6:30 ರಿಂದ ಕು. ಅಪೇಕ್ಷಾರವರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here