ಸೈಂಟ್ ಥೋಮಸ್ ಸ್ಕೂಲ್ ಬೈಂದೂರು 24ನೇ ವಾರ್ಷಿಕ ಸ್ಪೋರ್ಟ್ಸ್ ಮೀಟ್ ಶಾಲಾ ಮೈದಾನದಲ್ಲಿ ಸಂಭ್ರಮದಲ್ಲಿ ನಡೆಯಿತು.
ತಿಮ್ಮೆಶ್ ಬಿ.ಎನ್ ಪೊಲೀಸ್ ಉಪ ನಿರೀಕ್ಷಕರು, ಬೈಂದೂರು ಮಾತನಾಡಿ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿ, ಕ್ರೀಡೆ ಬದುಕಿನಲ್ಲಿ ಶಿಸ್ತು ಮೂಡಿಸುತ್ತದೆ. ಪ್ರತಿಯೊಬ್ಬರೂ ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು.
ಸಂಸ್ಥೆಯ ಪ್ರಾಂಶುಪಾಲರಾದ ಫಾದರ್ Philip Nellivila ಅವರು ಪ್ರಾಸ್ತವಿಕ ಮಾತನಾಡಿ ಈ ವರ್ಷ ವಾರ್ಷಿಕ ಕ್ರೀಡಾಕೂಟ ಬಹಳ ಅದ್ದೂರಿನ ನಡೆದಿದೆ ಪ್ರತಿಯೊಂದು ಮಕ್ಕಳು ಭಾಗವಹಿಸಿ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಎತ್ತಿ ಹಿಡಿದರು ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಥಿಸಿ.13 ವರ್ಷಗಳ ಹಿಂದೆ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದೆ ಹಾಗೆ ಮತ್ತೆ ಪುನಃ ಸೇವೆ ಸಲ್ಲಿಸುವ ಭಾಗ್ಯ ಈ ವರ್ಷ ನನಗೆ ಒಲಿದು ಬಂದಿದೆ ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಹೆಸರು ಮಾಡುವಂತ ದೊಡ್ಡ ಸಂಸ್ಥೆಯಾಗಿ ನಮ್ಮ ಸಂಸ್ಥೆ ಮೂಡಿಬರುತ್ತದೆ ಎಂದರು
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸಂತೋಷ್ ಕಾಯ್ಕಿಣಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕ್ರೀಡೆಯು ದೈಹಿಕ ಹಾಗೂ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢವಾಗಿಸುತ್ತದೆ. ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು. ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಗುಣವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ದೈಹಿಕ ಶಿಕ್ಷಕ ಕಿಶೋರ್ ಕ್ರೀಡಾಕೂಟ ನಿರ್ವಹಿಸಿದರು. ಶ್ರೀಮತಿ ಸ್ನೇಹ, ಕುಮಾರಿ ಗಿಲ್ನ ಕಾರ್ಯಕ್ರಮ ನಿರೂಪಿಸಿದರು
ನೀರಜ್ ಮತ್ತು ಶಿಲ್ಪಾ ವಂದಿಸಿದರು.

