ಮಂಗಳೂರು: ಭಾರತದ ಅತಿದೊಡ್ಡ ಸ್ವತಂತ್ರ ಚಿಲ್ಲರೆ (ಬಿಡಿ) ಆರೋಗ್ಯ ವಿಮಾ ಕಂಪನಿಯಾದ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರೆನ್ಸ್ ಕಳೆದ 5 ಹಣಕಾಸು ವರ್ಷಗಳಲ್ಲಿ 4.8 ಲಕ್ಷಕ್ಕೂ ಹೆಚ್ಚು ಕ್ಲೇಮ್‍ಗಳನ್ನು ಇತ್ಯರ್ಥಪಡಿಸಿದೆ, ರಾಜ್ಯಾದ್ಯಂತ ಗ್ರಾಹಕರಿಗೆ 2,800 ಕೋಟಿ ರೂ.ಗಿಂತ ಹೆಚ್ಚಿನ ಹಣಪಾವತಿಸಿದ್ದು, ಈ ಮೂಲಕ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ವಿಮಾ ಪಾಲುದಾರನಾಗಿ ತನ್ನ ಪಾತ್ರವನ್ನು ಬಲಪಡಿಸಿದೆ.
ರಾಷ್ಟ್ರ ಮಟ್ಟದಲ್ಲಿ ಸ್ಟಾರ್ ಹೆಲ್ತ್, ಅತಿದೊಡ್ಡ ಚಿಲ್ಲರೆ ಆರೋಗ್ಯ ವಿಮಾ ಕಂಪನಿಯಾಗಿದ್ದು, ಪ್ರಾರಂಭದಿಂದಲೂ 1 ಕೋಟಿಗೂ ಹೆಚ್ಚು ಕ್ಲೈಮ್‍ಗಳನ್ನು ಇತ್ಯರ್ಥಪಡಿಸಿದ್ದು, 52,000 ಕೋಟಿ ರೂ.ಗಿಂತ ಹೆಚ್ಚಿನ ಕ್ಲೈಮ್ ಮೊತ್ತ ಪಾವತಿಸಿದೆ, 2025 ಅಂತ್ಯದವರೆಗೆ ಚಿಲ್ಲರೆ ಆರೋಗ್ಯ ವಿಮೆಯಲ್ಲಿ ಸುಮಾರು 33% ಮಾರುಕಟ್ಟೆ ಪಾಲು ಹೊಂದಿದೆ ಎಂದು ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್‍ನ ಸಿಎಂಒ ಹಿಮಾಂಶು ವಾಲಿಯಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಂಪನಿಯ ಮೊಬೈಲ್ ಅಪ್ಲಿಕೇಶನ್ 11 ದಶಲಕ್ಷ ಡೌನ್‍ಲೋಡ್‍ಗಳನ್ನು ಮೀರಿದೆ, ಆದರೆ ಅದರ ಭೌತಿಕ ಉಪಸ್ಥಿತಿಯು ಕರ್ನಾಟಕದಲ್ಲಿ 71 ಶಾಖೆಗಳೊಂದಿಗೆ ವಿಸ್ತರಿಸುತ್ತಲೇ ಇದೆ. 55,000ಕ್ಕಿಂತ ಹೆಚ್ಚಿನ ಏಜೆಂಟ್‍ಗಳು ಮತ್ತು 1,100 ಆಸ್ಪತ್ರೆ ಜಾಲಗಳು 93% ನಗದುರಹಿತ ಕ್ಲೈಮ್‍ಗಳನ್ನು ಸರಾಗವಾಗಿ ಪ್ರಕ್ರಿಯೆಗೊಳಿಸುತ್ತವೆ. ಸ್ಟಾರ್ ಹೆಲ್ತ್ ಇನ್ಶುರೆನ್ಸ್ ಕರ್ನಾಟಕದಲ್ಲಿ ಚಿಲ್ಲರೆ ಆರೋಗ್ಯ ವಿಮೆಯಲ್ಲಿ ಮಾರುಕಟ್ಟೆ ನಾಯಕತ್ವ ಸ್ಥಾನ ಹೊಂದಿದೆ, ಆರೋಗ್ಯ ವಿಮೆಯಲ್ಲಿ 31% ಮಾರುಕಟ್ಟೆ ಪಾಲು ಹೊಂದಿದೆ. ಕರ್ನಾಟಕದಲ್ಲಿ ಜೀವವಿಮೆಗಳ ಸಂಖ್ಯೆ 2025ರಲ್ಲಿ 19 ಲಕ್ಷಕ್ಕೂ ಹೆಚ್ಚಿದೆ ಎಂದು ವಿವರಿಸಿದ್ದಾರೆ.
2025ನೇ ಹಣಕಾಸು ವರ್ಷದಲ್ಲಿ, ಸ್ಟಾರ್ ಹೆಲ್ತ್ 1.13 ಲಕ್ಷಕ್ಕೂ ಹೆಚ್ಚು ಕ್ಲೈಮ್‍ಗಳನ್ನು ಇತ್ಯರ್ಥಪಡಿಸಿದ್ದು, ಗ್ರಾಹಕರಿಗೆ 650 ಕೋಟಿ ರೂ.ಗಿಂತ ಹೆಚ್ಚಿನ ಕ್ಲೈಮ್‍ಗಳನ್ನು ವಿತರಿಸಿದೆ. ಬೆಂಗಳೂರು 440 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಕ್ಲೈಮ್‍ಗಳೊಂದಿಗೆ ಅತಿದೊಡ್ಡ ಪಾಲು ಹೊಂದಿದ್ದು, ನಂತರ ಮೈಸೂರು 40 ಕೋಟಿ ರೂ., ಮಂಗಳೂರು 30 ಕೋಟಿ ರೂ., ಶಿವಮೊಗ್ಗ 21 ಕೋಟಿ ರೂ. ಮತ್ತು ಹಾಸನ 21 ಕೋಟಿ ರೂ. ಮೌಲ್ಯದ ಕ್ಲೈಮ್‍ಗಳನ್ನು ಹೊಂದಿದೆ ಎಂದು ಅಂಕಿ ಅಂಶ ನೀಡಿದರು.
