ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯ ಹಂಡೇಲು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ 23ರಂದು ಸಂಜೆ 6 ರಿಂದ ರಾತ್ರೆ 8.30 ತನಕ ಆಕಾಶದ ನಕ್ಷತ್ರಗಳ ವೀಕ್ಷಣೆಯ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಜವಾಹರ ಲಾಲ್ ನೆಹರು ತಾರಾಲಯದ ಅಧಿಕಾರಿಗಳಾದ ದೀಪಕ್ ಎಸ್ ಮತ್ತು ಲೋಕೇಶ್ ಎಲ್ ಅವರು ನಕ್ಷತ್ರ ವೀಕ್ಷಣೆಗೆ ಅವಕಾಶವನ್ನು ಮಾಡಿಕೊಟ್ಟಿದ್ದರು.
ಮುಖ್ಯ ಶಿಕ್ಷಕಿ ಚಂದ್ರಕಾಂತಿ ತಾರಾಲಯದವರನ್ನು ಸ್ವಾಗತಿಸಿದರು. ಶಿಕ್ಷಕಿ ಚಿತ್ರಾವತಿ, ದೊರೆಸ್ವಾಮಿ, ಸುಶ್ಮಿತಾ, ಮೋಕ್ಷ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಸ್ಥಳೀಯ ಹಲವಾರು ಮಂದಿ ಪೋಷಕರು, ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಮತ್ತು ಆಸಕ್ತ ಹಲವಾರು ಮಂದಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಶಿಕ್ಷಕಿ ಜಯಶ್ರೀ ವಂದಿಸಿದರು.

