ಅ.12ರಂದು ವಾಯ್ಸ್‌ ಆಫ್‌ ಆರಾಧನ ನೇತೃತ್ವದಲ್ಲಿ ರಾಜ್ಯ ಮಟ್ಟದ ಮಕ್ಕಳ ಹಬ್ಬ

0
106


ಮೂಡುಬಿದಿರೆ: ವಾಯ್ಸ್‌ ಆಫ್‌ ಆರಾಧನ ನೇತೃತ್ವದಲ್ಲಿ ರಾಜ್ಯ ಮಟ್ಟದ ಮಕ್ಕಳ ಹಬ್ಬವು ಅ. 12, 2025 ರಂದು ಸರಸ್ವತಿ ಸದನ ಕಟೀಲಿನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಬೆಳಿಗ್ಗೆ ಗಂಟೆ 11 ರಿಂದ ಮಕ್ಕಳ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೇಯಾ ಸುಳ್ಯ ವಹಿಸಲಿರುವರು. ಶ್ರೀನಿಧಿ ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಲಿರುವರು. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರ ವಾಸುದೇವ ಅಸ್ರಣ್ಣ ಅವರು ಆಶೀರ್ವಚನ ನೀಡಲಿರುವರು ಹಾಗೂ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರು ಹಾಗೂ ಸನಂತಪದ್ಮನಾಭ ಅಸ್ರಣ್ಣರು ಶುಭನುಡಿಯನ್ನು, ಹರಿನಾರಾಯಣ ದಾಸ ಅಸ್ರಣ್ಣರು ಶುಂಭಾಶಂಸನೆಯನ್ನು ನೀಡಲಿರುವರು. ವಾಯ್ಸ್‌ ಆಫ್‌ ಆರಾಧನದ ಸ್ಥಾಪಕರಾದ ಪದ್ಮಶ್ರೀ ಭಟ್‌ ಇವರು ಪ್ರಸ್ತಾವನೆ ಮಂಡಿಸಲಿರುವರು. ಮುಖ್ಯ ಅತಿಥಿಗಳಾಗಿ, ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ಶೈಲಾ ಕೆ. ಕಾರಗಿ, ಕೊಡೆತ್ತೂರು ಭುವನಾಭಿರಾಮ ಉಡುಪ, ಡಾ. ರಾಜೇಶ್‌ ಆಳ್ವ ಬದಿಯಡ್ಕ, ಪ್ರವೀಣ್‌ ಕುಮಾರ್‌ ಕೊಡಿಯಾಲ್‌ ಬೈಲ್‌, ವೇಣುಗೋಪಾಲ ರಾಘವೇಂದ್ರ ರಾವ್‌ ಅಗರಿ ಉಪಸ್ಥಿತರಿರಲಿರುವರು.
ಸಮಾರೋಪ ಸಮಾರಂಭದಲ್ಲಿ ಲಕ್ಷೀನಾರಾಯಣ ಅಸ್ರಣ್ಣ, ಡಾ. ಮಂದಾರ ರಾಜೇಶ್‌ ಭಟ್‌, ರಾಜೇಶ್‌ ಸ್ಕೈಲಾರ್ಕ್‌, ಸದಾನಂದ ನಾರಾವಿ, ಚಂದ್ರಹಾಸ ದೇವಾಡಿಗ, ಸಾಣೂರು ಅರುಣ್‌ ಶೆಟ್ಟಿಗಾರ್‌ ಅಜೆಕಾರು ಉಪಸ್ಥಿತರಿರುವರು.
ಕಾರ್ಯಕ್ರಮವನ್ನು ಚೇತನಾ ಹೆಗಡೆ ನಿರೂಪಿಸಲಿರುವರು.

LEAVE A REPLY

Please enter your comment!
Please enter your name here