ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯ ಫಲಿತಾಂಶ

0
79

ಯುವವಾಹಿನಿ ಬಂಟ್ವಾಳ ಘಟಕವು ಸಾಹಿತ್ಯ ಬರವಣಿಗೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕವಿ, ಸಾಹಿತಿ, ಸಂಘಟಕ ಬಿ.ತಮ್ಮಯ್ಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸಾಹಿತ್ಯ ಸ್ಪರ್ಧೆಯು ಸಾಹಿತ್ಯದ ಎರಡು ಪ್ರಕಾರಗಳನ್ನು ಕೇಂದ್ರೀಕರಿಸಿ ನಡೆಸಿದ್ದು ಅದರ ಫಲಿತಾಂಶ ಪ್ರಕಟಗೊಂಡಿದೆ. ‘ಅತೀ ಸಣ್ಣಕಥೆ’ ಸ್ಪರ್ಧೆಯಲ್ಲಿ ಸುಲ್ತಾನ್ ಮಾನ್ಸೂರು ಮಂಚಿ ಅವರ ಸಣ್ಣಕಥೆ “ಜಾಥಾ” ಪ್ರಥಮ ಸ್ಥಾನವನ್ನೂ ,ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಸಣ್ಣಕಥೆ “ಸ್ಫೋಟ” ದ್ವಿತೀಯ ಬಹುಮಾನವನ್ನು ಪಡೆದಿರುತ್ತದೆ. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಅವರ “ಬೂಬು ಎಂಬ ಮರಿ-ಮೊಮ್ಮಗಳು” ಪ್ರಥಮ ಬಹುಮಾನವನ್ನೂ, *ನಳಿನಿ ಭೀಮಪ್ಪ ದಾರವಾಡ ಅವರ “ಮುಡಿಯಿಂದ ಜಾರುತಿಹವೋ…!” ಲಲಿತ ಪ್ರಬಂಧ ದ್ವಿತೀಯ ಬಹುಮಾನವನ್ನು ಪಡೆದಿರುತ್ತದೆ. ಈ ಸ್ಪರ್ಧೆಗಳಲ್ಲಿ ನಾಡಿನ ಹಿರಿಕಿರಿಯ ಸಾಹಿತಿಗಳಿಂದ ನೂರಕ್ಕೂ ಹೆಚ್ಚಿನ ಪ್ರವೇಶಗಳು ಬಂದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಪರ್ಧೆಯ ವಿಜೇತರಿಗೆ ಯುವವಾಹಿನಿ ಆಯೋಜಿಸುವ ಕಾರ್ಯಕ್ರಮದಲ್ಲಿ ನಗದು ಪ್ರಶಸ್ತಿ ಪತ್ರದೊಂದಿಗೆ ಅಭಿನಂದಿಸಲಾಗುವುದು.

LEAVE A REPLY

Please enter your comment!
Please enter your name here