ಸೆಂಜರ್ ವೆಹಿಕಲ್ ಎಕ್ಸ್‌ಪೋ 2.0 ರಲ್ಲಿ ಅತ್ಯಾಧುನಿನಕ ಸಾರಿಗೆ ಉತ್ಪನ್ನಗಳ ಪ್ರದರ್ಶನ

0
5

100 ಮ್ಯಾಗ್ನಾ ಇವಿ ಇಂಟರ್‌ಸಿಟಿ ಬಸ್ ಗಳನ್ನು ಪೂರೈಸಲು ಗ್ರೀನ್ ಎನರ್ಜಿ ಮೊಬಿಲಿಟಿ ಸೊಲ್ಯೂಷನ್ಸ್‌ ಜೊತೆ ಒಡಂಬಡಿಕೆಗೆ ಸಹಿ ಹಾಕಿದ ಟಾಟಾ ಮೋಟಾರ್ಸ್

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಯೂನಿವರ್ಸಲ್ ಬಸ್ ಸರ್ವೀಸಸ್ (ಯುಬಿಎಸ್) ಅಧೀನದ ಎಲೆಕ್ಟ್ರಿಕ್ ಸಾರಿಗೆ ಉತ್ಪನ್ನ ತಯಾರಕ ಸಂಸ್ಥೆಯಾದ ಗ್ರೀನ್ ಎನರ್ಜಿ ಮೊಬಿಲಿಟಿ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ (ಜಿಇಎಂಎಸ್) ಜೊತೆಗೆ 100 ಅತ್ಯಾಧುನಿಕ ಮ್ಯಾಗ್ನಾ ಇವಿ ಇಂಟರ್‌ಸಿಟಿ ಬಸ್ ಗಳನ್ನು ಪೂರೈಸಲು ಒಡಂಬಡಿಕೆಗೆ (ಎಂಓಯು)ಗೆ ಸಹಿ ಹಾಕಿದೆ.

ಚೆನ್ನೈನಲ್ಲಿ ನಡೆದ ಪ್ಯಾಸೆಂಜರ್ ವೆಹಿಕಲ್ ಎಕ್ಸ್‌ಪೋ 2.0 ರಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಈ ಒಡಂಬಡಿಕೆಗೆ ತಮಿಳುನಾಡು ಸರ್ಕಾರದ ಕೈಗಾರಿಕಾ ಸಚಿವರಾದ ಡಾ. ಟಿ.ಆರ್.ಬಿ. ರಾಜಾ, ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ಮತ್ತು ಆಲ್ ಓಮ್ನಿಬಸ್ ಓನರ್ಸ್ ಅಸೋಸಿಯೇಷನ್ (ಎಓಬಿಓಎ) ಸದಸ್ಯರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.

ಈ ಎಕ್ಸ್ ಪೋದಲ್ಲಿ ಟಾಟಾ ಮೋಟಾರ್ಸ್ ತನ್ನ ಹೊಸ ವಾಣಿಜ್ಯ ಪ್ರಯಾಣಿಕ ಸಾರಿಗೆ ಉತ್ಪನ್ನಗಳನ್ನು ಪ್ರದರ್ಶಿಸಿತು. ವಿಶೇಷವಾಗಿ ಇಲ್ಲಿ ಉನ್ನತ ಕಾರ್ಯಕ್ಷಮತೆ, ಅತ್ಯುತ್ತಮ ಪ್ರಯಾಣಿಕ ಸೌಕರ್ಯ ಒದಗಿಸುವ ಮತ್ತು ಕಡಿಮೆ ಮಾಲೀಕತ್ವ ವೆಚ್ಚ ಹೊಂದಲು ವಿನ್ಯಾಸಗೊಳಿಸಲಾಗಿರುವ ಎಲೆಕ್ಟ್ರಿಕ್ ಮ್ಯಾಗ್ನಾ ಇವಿ ಮತ್ತು ಎಲ್ ಪಿ ಓ 1822 ಅನ್ನು ಪ್ರದರ್ಶಿಸಲಾಯಿತು.

ಯೂನಿವರ್ಸಲ್ ಬಸ್ ಸರ್ವೀಸಸ್ ದಕ್ಷಿಣ ಭಾರತದಲ್ಲಿನ ಪ್ರಮುಖ ಪ್ರೀಮಿಯಂ ಅಂತರ್ ನಗರ ಟ್ರಾವೆಲ್ ಬ್ರಾಂಡ್ ಆಗಿದ್ದು, ಇದು ಹೊಸತನ, ವಿಶ್ವಾಸಾರ್ಹತೆ ಮತ್ತು ಗ್ರಾಹಕ ಕೇಂದ್ರಿತ ಸೇವೆಗಳಿಗೆ ಹೆಸರುವಾಸಿಯಾಗಿದೆ. ಇದರ ಹೊಸ ಇಂಟಿಗ್ರೇಟೆಡ್ ಇವಿ ಘಟಕವಾದ ಗ್ರೀನ್ ಎನರ್ಜಿ ಮೊಬಿಲಿಟಿ ಸೊಲ್ಯೂಷನ್ಸ್, ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್‌ ಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯ ಒದಗಿಸುವ ಮೂಲಕ ಯುಬಿಎಸ್ ಅನ್ನು ಸುಸ್ಥಿರ ಸಾರಿಗೆ ವ್ಯವಸ್ಥೆ ಕಡೆಗೆ ಬದಲಾಯಿಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ತಮಿಳುನಾಡು ಸರ್ಕಾರದ ಕೈಗಾರಿಕಾ ಸಚಿವರಾದ ಡಾ. ಟಿ.ಆರ್.ಬಿ. ರಾಜಾ ಅವರು, “ತಮಿಳುನಾಡು ರಾಜ್ಯವು ಆಟೋಮೊಟಿವ್ ಮತ್ತು ಸ್ವಚ್ಛ ಸಾರಿಗೆ ವ್ಯವಸ್ಥೆ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಯೂನಿವರ್ಸಲ್ ಬಸ್ ಸರ್ವೀಸಸ್‌ ಜೊತೆಗೆ ಟಾಟಾ ಮೋಟಾರ್ಸ್‌ ಮಾಡಿಕೊಂಡಿರುವ ಇಂಟರ್‌ಸಿಟಿ ಎಲೆಕ್ಟ್ರಿಕ್ ಬಸ್‌ ಗಳ ಪೂರೈಕೆ ಒಡಂಬಡಿಕೆಯು ಒಂದು ಮಹತ್ವದ ಹೆಜ್ಜೆಯಾಗಿದ್ದು, ಹಸಿರು ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆ ಅಳವಡಿಸುವ ನಿಟ್ಟಿನಲ್ಲಿ ಪ್ರಮುಖವಾಗಿದೆ. ಈ ಯೋಜನೆಯು ತಮಿಳುನಾಡಿನ ಜನರಿಗೆ ಸ್ವಚ್ಛ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮೂಲಕ ನೇರವಾಗಿ ಲಾಭ ಒದಗಿಸಲಿದೆ ಮತ್ತು ಭವಿಷ್ಯ ಸಿದ್ಧ, ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಸಾರುತ್ತದೆ” ಎಂದು ಹೇಳಿದರು.

ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಯೂನಿವರ್ಸಲ್ ಬಸ್ ಸರ್ವೀಸಸ್‌ನ ವ್ಯವಸ್ಥಾಪಕ ಪಾಲುದಾರ ಮತ್ತು ಗ್ರೀನ್ ಎನರ್ಜಿ ಮೊಬಿಲಿಟಿ ಸೊಲ್ಯೂಷನ್ಸ್‌ ನ ನಿರ್ದೇಶಕರಾದ ಶ್ರೀ ಸುನಿಲ್ ಕುಮಾರ್ ರವೀಂದ್ರನ್ ಅವರು, “ಟಾಟಾ ಮೋಟಾರ್ಸ್‌ ಜೊತೆಗಿನ ನಮ್ಮ ದೀರ್ಘಕಾಲೀನ ಸಂಬಂಧವು ವಿಶ್ವಾಸದ ಮೇಲೆ ನಿರ್ಮಿತವಾಗಿದೆ. ಈ ಒಡಂಬಡಿಕೆಯು ಮ್ಯಾಗ್ನಾ ಇವಿ ಬಸ್ ಗಳೊಂದಿಗೆ ಇಂಟರ್‌ಸಿಟಿ ಎಲೆಕ್ಟ್ರಿಕ್ ಪ್ರಯಾಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ಬಹಳ ಪ್ರಮುಖವಾಗಿದೆ. ಈ ಬಸ್‌ ಗಳು ಶಾಂತ, ಆರಾಮದಾಯಕ ಪ್ರಯಾಣ ಮತ್ತು ಅತ್ಯಾಧುನಿಕ ಪ್ರಯಾಣಿಕ ಅನುಭವವನ್ನು ಒದಗಿಸಲಿದ್ದು, ದೀರ್ಘಾವಧಿಯ ಪ್ರಯಾಣಗಳಿಗೆ ಸೂಕ್ತವಾಗಿವೆ. ಕಡಿಮೆ ಕಾರ್ಯಾಚರಣೆ ವೆಚ್ಚ ಮತ್ತು ಶೂನ್ಯ ಹೊರಸೂಸುವಿಕೆ ಹೊಂದಿರುವ ಈ ಬಸ್‌ಗಳು ನಮ್ಮ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಸುಸ್ಥಿರ ಸಾರಿಗೆ ವ್ಯವಸ್ಥೆ ಕಡೆಗಿನ ನಮ್ಮ ಬದ್ಧತೆಯನ್ನು ತೋರಿಸುತ್ತವೆ” ಎಂದು ಹೇಳಿದರು.

ಟಾಟಾ ಮೋಟಾರ್ಸ್‌ ನ ವಾಣಿಜ್ಯ ಪ್ರಯಾಣಿಕ ವಾಹನ ವ್ಯಾಪಾರದ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ಶ್ರೀ ಆನಂದ್ ಎಸ್ ಅವರು, “ಯುಬಿಎಸ್ ಜೊತೆಗಿನ ಈ ಒಡಂಬಡಿಕೆಯು ಇಂಟರ್‌ಸಿಟಿ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸುವ ನಮ್ಮ ಪಯಣದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ವ್ಯಾಪಕವಾದ ಗ್ರಾಹಕ ಪ್ರತಿಕ್ರಿಯೆ ಮತ್ತು ಕಠಿಣ ಪರೀಕ್ಷೆಯ ಮೂಲಕ ಅಭಿವೃದ್ಧಿಪಡಿಸಲಾದ ಮ್ಯಾಗ್ನಾ ಇವಿ, ಭಾರತದಲ್ಲಿ ದೀರ್ಘಾವಧಿಯ ಪ್ರಯಾಣ ವಿಭಾಗವನ್ನು ಮರುರೂಪಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಇದು ಆರಾಮ, ದಕ್ಷತೆ ಮತ್ತು ಸುಸ್ಥಿರತೆ ವಿಚಾರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿದೆ ಎಂಬುದರ ಕುರಿತು ನಮಗೆ ವಿಶ್ವಾಸವಿದೆ. ಭಾರತದ ಪ್ರಮುಖ ಎಲೆಕ್ಟ್ರಿಕ್ ಸಮೂಹ ಸಾರಿಗೆ ಉತ್ಪನ್ನ ಒದಗಿಸುವವರಾಗಿ ಟಾಟಾ ಮೋಟಾರ್ಸ್ ಸ್ವಚ್ಛ ಮತ್ತು ಸಂಪರ್ಕಿತ ಸಾರಿಗೆಯ ಭವಿಷ್ಯವನ್ನು ರೂಪಿಸಲು ಬದ್ಧವಾಗಿದೆ” ಎಂದರು.

ಟಾಟಾ ಮ್ಯಾಗ್ನಾ ಇವಿ ಕೋಚ್ ಒಂದು ಸಂಪೂರ್ಣ ಎಲೆಕ್ಟ್ರಿಕ್ ಇಂಟರ್‌ಸಿಟಿ ಬಸ್ ಆಗಿದ್ದು, ಒಂದು ಚಾರ್ಜ್‌ನಲ್ಲಿ 300 ಕಿ.ಮೀ ವರೆಗೆ ಚಲಿಸಬಲ್ಲದು. ಇದು ದೀರ್ಘಾವಧಿಯ ಆರಾಮಕ್ಕಾಗಿ 44 ಆಸನಗಳ ಸಂರಚನೆಯನ್ನು ಹೊಂದಿದೆ. ಎರ್ಗೊನಾಮಿಕ್ ಆಸನಗಳು, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ (EBS) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮೂಲಕ ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.

ಟಾಟಾ ಮೋಟಾರ್ಸ್ ಭಾರತದ ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, ಸ್ಟಾರ್‌ಬಸ್ ಇವಿ ಮತ್ತು ಇಂಟರ್ ಸಿಟಿಗೆ ಅಲ್ಟ್ರಾ ಇವಿ ಮತ್ತು ಇಂಟರ್‌ಸಿಟಿಗೆ ಮ್ಯಾಗ್ನಾ ಇವಿ ಸೇರಿದಂತೆ ವೈವಿಧ್ಯಮಯ ಬಸ್ ಶ್ರೇಣಿಯನ್ನು ಹೊಂದಿದೆ. 11 ನಗರಗಳಲ್ಲಿ 3,600ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ ಗಳು ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಒಟ್ಟಾರೆ 34 ಕೋಟಿ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿವೆ ಮತ್ತು ಶೇ.95 ಕ್ಕಿಂತ ಹೆಚ್ಚು ಲಭ್ಯತೆಯನ್ನು ಹೊಂದಿವೆ. ಈ ಬಸ್‌ ಗಳು ಟಾಟಾ ಮೋಟಾರ್ಸ್‌ನ ಕನೆಕ್ಟೆಡ್ ವೆಹಿಕಲ್ ಪ್ಲಾಟ್ ಫಾರ್ಮ್ ಆದ ಫ್ಲೀಟ್ ಎಡ್ಜ್‌ ಹೊಂದಿದ್ದು, ಇದು ಆಯಾ ಸಮಯದಲ್ಲಿ ಮಾಹಿತಿ, ಟ್ರ್ಯಾಕಿಂಗ್ ಒದಗಿಸುತ್ತದೆ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here