ನಿರಂತರ ಚಟುವಟಿಕೆಯಿಂದಿರಿ : ಅರುಣಾಚಲಂ

0
6

ಬ್ರಹ್ಮಾವರ : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಎಸಿ ಮತ್ತು ರೆಫ್ರಿಜರೇಷನ್ ದುರಸ್ಥಿ ಮತ್ತು ಸೇವೆ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ರುಣಾಚಲಂ, ಹಿರಿಯ ವ್ಯವಸ್ಥಾಪಕರು. ಕೆನರಾ ಬ್ಯಾಂಕ್, ಉಪನ್ಯಾಸಕರು, ಎಲ್ ಡಿ ಸಿ ಹುಬ್ಬಳ್ಳಿ ಅವರು ಎಸಿ ಮತ್ತು ರೆಫ್ರಿಜರೇಷನ್ ದುರಸ್ಥಿ ಮತ್ತು ಸೇವೆ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತರಬೇತಿಯನ್ನು ಉತ್ತಮವಾಗಿ ಪಡೆದಿದ್ದೀರಿ, ಪ್ರತಿಯೊಬ್ಬರು ಪಡೆದಿರುವ ತರಬೇತಿಯನ್ನು ಯಶಸ್ವಿಗೊಳಿಸಬೇಕೆಂದರೆ, ಸರಿಯಾದ ಯೋಜನೆಯನ್ನು ರೂಪಿಸಿಕೊಳ್ಳಿ, ಹಾಗೂ ನಿರಂತರ ಚಟುವಟಿಕೆಯಿಂದ ಇದ್ದು, ಪ್ರಯತ್ನವನ್ನು ಮಾಡಿ. ಅದೇ ರೀತಿ ನಿಮ್ಮ ಉದ್ಯಮವನ್ನು ಸಣ್ಣದಾಗಿ ಪ್ರಾರಂಭಿಸಿ, ಹಾಗೆಯೇ ಹತ್ತಿರದ ಬ್ಯಾಂಕ್ ಬ್ರಾಂಚ್, ಸರಕಾರಿ ಕಚೇರಿಗಳು, ಸಂಘ ಸಂಸ್ಥೆಗಳಿಗೆ ಹೋಗಿ, ನಿಮ್ಮಲ್ಲಿರುವ ವಿಸಿಟಿಂಗ್ ಕಾರ್ಡ್ಗಳನ್ನು ವಿತರಿಸಿ, ಮಾಹಿತಿಯನ್ನು ನೀಡಿ ಬಂದರೆ, ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ನಿಮ್ಮನ್ನು ಗುರುತಿಸಿ ಕರೆಯುತ್ತಾರೆ. ಈ ರೀತಿಯಾಗಿ ನಿಮ್ಮ ಉದ್ಯಮವನ್ನು ಮುಂದುವರಿ. ಯಶಸ್ಸು ಖಂಡಿತವಾಗಿ ನಿಮ್ಮದಾಗುತ್ತದೆ. ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ. ಎಂ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಿ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ತಳಮಟ್ಟದ ತರಬೇತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ. ನಿಮ್ಮಲ್ಲಿರುವ ಆಸಕ್ತಿಯನ್ನು ಇನ್ನೂ ಹೆಚ್ಚಿನ ಮಟ್ಟಿಗೆ ಅಭಿವೃದ್ಧಿ ಪಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಕಛೇರಿ ಸಹಾಯಕರಾದ ಚೈತ್ರ. ಕೆ ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಕಛೇರಿ ಸಹಾಯಕರಾದ ರವಿ ವಂದಿಸಿದರು.

LEAVE A REPLY

Please enter your comment!
Please enter your name here