ಮನೆ ಮೇಲಿಂದ ಮಗುವನ್ನು ತಳ್ಳಿದ ಮಲತಾಯಿ: ಬಿದ್ದು ಒದ್ದಾಡಿ ಪ್ರಾಣ ಬಿಟ್ಟ ಪುಟ್ಟ ಬಾಲಕಿ

0
188

ಬೀದರ್: ತಂದೆಗೆ ಎರಡನೇ ಹೆಂಡ್ತಿಯಾದವಳು, ಪುಟ್ಟ ಬಾಲಕಿಗೆ ತಾಯಿ ಆಗ್ತೀನಿ ಎಂದು ಬಂದಿದ್ದ ಮಲತಾಯಿ ರಾಕ್ಷಸಿಯಾಗ್ಬಿಟ್ಟಿದ್ದಾಳೆ. ಬಿಲ್ಡಿಂಗ್‌ನಿಂದ ಬಿದ್ದು ಮೊಮ್ಮಗಳು ಜೀವ ಬಿಟ್ಟಳು ಅಂದುಕೊಂಡಿದ್ದ ಅಜ್ಜಿಗೆ ಮಲತಾಯಿಯ ಕ್ರೌರ್ಯವನ್ನ ಸಿಸಿಟಿವಿ ಬಿಚ್ಚಿಟ್ಟಿದೆ. ತಾಯಿ ಸ್ಥಾನ ತುಂಬುತ್ತೀನಿ ಅಂತ ಬಂದಿದ್ದ ಮಲತಾಯಿಯೇ ಬಾಲಕಿ ಜೀವವನ್ನ ಬಲಿ ಪಡೆದಿದ್ದಾಳೆ. 3ನೇ ಮಹಡಿಯಿಂದ 7 ವರ್ಷದ ಸಾನ್ವಿಯನ್ನ ತಳ್ಳಿ ಮಲತಾಯಿ ರಾಧಾ ಹತ್ಯೆಗೈದಿರುವ ಘಟನೆ ಬೀದರ್‌ನ ಆದರ್ಶ ಕಾಲೋನಿಯಲ್ಲಿ ನಡೆದಿದೆ. ಮಲತಾಯಿ ತಳ್ಳಿದ್ದರಿಂದ ಕೆಳಗೆ ಬಿದ್ದ ಸಾನ್ವಿ, ಅಲ್ಲಿಂದ ನಡೆದುಕೊಂಡು ರಸ್ತೆಗೆ ಬಂದು ಒದ್ದಾಡಿ ಜೀವಬಿಟ್ಟಿದ್ದಾಳೆ. ಇನ್ನು ಸಾನ್ವಿಯ ಕೊನೆ ಕ್ಷಣದ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ನೋಡಿದ್ರೆ ಕರುಳು ಚುರುಕ್ ಅನ್ನುತ್ತೆ. ಕಣ್ಣಲ್ಲಿ ನೀರು ಬರುತ್ತೆ.

ಬಿದ್ದ ತಕ್ಷಣ ಸಾನ್ವಿ ನಿಲ್ಲುವ ಸ್ಥಿತಿಯಲ್ಲಿರಲಿಲ್ಲ. ಆದರೂ ನರಳಾಡುತ್ತ ಎದ್ದು ರಸ್ತೆಗೆ ಬರಲು ಯತ್ನಿಸಿದ್ದಾಳೆ. ಆ ವೇಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ  ಹಿಡಿದುಕೊಳ್ಳಿ ಎಂದು ಕೈಚಾಚಿದ್ದಾಳೆ. ಆಗ ಕೆಲವರು ಬಂದು ಸಾನ್ವಿಯನ್ನು ಹಿಡಿದು ನಿಲ್ಲಿಸಲು ಯತ್ನಿಸಿದ್ದಾರೆ. ಆದ್ರೆ ಸಾನ್ವಿ ಬಿದ್ದ ರಭಸಕ್ಕೆ ನಿಲ್ಲಲು ಆಗಲಿಲ್ಲ. ಕೊನೆಗೆ ರಸ್ತೆಯಲ್ಲೇ ಒದ್ದಾಡಿ ಅಲ್ಲೇ ಕುಸಿದುಬಿದ್ದು ಜೀವ ಬಿಟ್ಟಿದ್ದಾಳೆ. ರಸ್ತೆಯಲ್ಲಿ ನರಳಾಡುತ್ತಿದ್ದರೂ ಸಹ ರಾಕ್ಷಸಿ ಮಲತಾಯಿ ಸಹ ಬಂದು ನೋಡಲೇ ಇಲ್ಲ. 

LEAVE A REPLY

Please enter your comment!
Please enter your name here