ಪ್ರತಿ ವರ್ಷ ನವೆಂಬರ್ 12ರಂದು ಬೀದಿ ಶ್ವಾನ ಸಂರಕ್ಷಣಾ ದಿನ ದಿನಾಚರಣೆಯ ಸ್ಟಿರ್ಕರ್ ಬಿಡುಗಡೆಯು ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಹಾಗೂ ಉಡುಪಿ ಜಿಲ್ಲಾ ಹೃದಯವಂತ ಶ್ವಾನ ರಕ್ಷಕರು ಮಂಜುಳಾ ಬಂಟಕಲ್ಲು, ಪ್ರಥ್ವಿ ಪೈ,ಸುಶ್ಮಿತಾ, ಜ್ಯೋತಿ ಚೇತನ್, ಅಜಯ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಿತು. ಬಳಿಕ ಮಾತಾಡಿದ ಗುರೂಜಿಯವರು ಬೀದಿ ಶ್ವಾನ ಸಂರಕ್ಷಣೆ ದಿನದ ಬಗ್ಗೆ ಮಾತನಾಡುತ್ತಾ
ಬೀದಿ ನಾಯಿಗಳ ಕಷ್ಟ ಮತ್ತು ಅವುಗಳ ರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.
ಲಸಿಕೆ ಮತ್ತು ವೈದ್ಯಕೀಯ ಚಿಕಿತ್ಸೆ: ಬೀದಿ ನಾಯಿಗಳಿಗೆ ಲಸಿಕೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡುವುದರ ಮಹತ್ವವನ್ನು ಎತ್ತಿ ತೋರಿಸುವುದು.
ದತ್ತು ಮತ್ತು ಆರೈಕೆ: ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಮತ್ತು ಅವುಗಳ ಆರೈಕೆ ಮಾಡಲು ಉತ್ತೇಜಿಸುವುದು.
ಸಂಘ ಸಂಸ್ಥೆಗಳಿಗೆ ಬೆಂಬಲ: ಬೀದಿ ನಾಯಿಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಣಿ ದಯಾ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡಲು ಪ್ರೋತ್ಸಾಹಿ ಎಂದು ತಿಳಿಸಿದರು.

