ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವ ಕಾಲೇಜು (ಸ್ವಾಯತ್ತ), ಉಜಿರೆ ಇದರ ಬಿ. ವೋಕ್ ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್ ವಿಭಾಗ ಹಾಗೂ ಧರ್ಮಸ್ಥಳದ ಮಂಜುಷಾ ಪುರಾತತ್ತ್ವ ಸಂಗ್ರಹಾಲಯದ ಸಹಭಾಗಿತ್ವದಲ್ಲಿ ಜು. 30ರಿಂದ ಆಗಸ್ಟ್ 2 ರವರೆಗೆ ವಿದ್ಯಾರ್ಥಿಗಳಿಗೆ ʼಆನಿಮೇಟೆಡ್ ಆರ್ಟಿಫ್ಯಾಕ್ಟ್ಸ್ʼ ಎಂಬ ವಿಶಿಷ್ಟ ಸ್ಟಾಪ್‌ಮೋಶನ್ ಅನಿಮೇಷನ್ ಕಾರ್ಯಾಗಾರ ನಡೆಯಿತು.
ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್ ವಿಭಾಗ ಹಾಗೂ ಮಂಜುಷಾ ವಸ್ತುಸಂಗ್ರಹಾಲಯದ ನಡುವೆ ಇರುವ ಒಡಂಬಡಿಕೆಯ ಭಾಗವಾಗಿ ಈ ಕಾರ್ಯಾಗಾರ ನಡೆಯಿತು. ವಿದ್ಯಾರ್ಥಿಗಳು ಮಣ್ಣಿನ ಕ್ಲೇ ಬಳಸಿ ವಿವಿಧ ಪ್ರತಿಕೃತಿಗಳನ್ನು ರಚಿಸಿ, ಅವುಗಳ ಸ್ಟಾಪ್ ಮೋಶನ್ ಸಿನಿಮಾವನ್ನು ನಿರ್ಮಾಣ ಮಾಡಿದರು. ಒಟ್ಟು ಆರು ತಂಡಗಳಾಗಿ ವಿದ್ಯಾರ್ಥಿಗಳನ್ನು ವಿಂಗಡಿಸಿ, ವಿವಿಧ ಕಿರುಚಿತ್ರಗಳನ್ನು ನಿರ್ಮಿಸಲಾಯಿತು. ಸುಮೇಧ ಮತ್ತು ತಂಡ ರಚಿಸಿದ ಸಿನಿಮಾಗೆ ವಿಶೇಷ ಪುರಸ್ಕಾರ ನೀಡಲಾಯಿತು.
ಆಗಸ್ಟ್ 2ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‌ಡಿಎಂ ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಂಜುಷಾ ವಸ್ತುಸಂಗ್ರಹಾಲಯದ ನಿರ್ದೇಶಕ ರಿತೇಶ್ ಶರ್ಮಾ, ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಮತ್ತು ವಿಭಾಗದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.