ಉಡುಪಿ: ಮುಂಬರುವ ಪರೀಕ್ಷೆಗೆ ಚೆನ್ನಾಗಿ ಓದಬೇಕು ಎಂದು ತಾಯಿ ಬುದ್ದಿವಾದ ಹೇಳಿದ್ದರಿಂದ ಬೇಸರಗೊಂಡ ಯುವತಿ ಮನೆಯ ಬೆಡ್ರೂಂನಲ್ಲಿ ಫ್ಯಾ ನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟು ಹೊಸಮನೆಯಲ್ಲಿ ನಡೆದಿದೆ.
ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಸಮನ್ವಿ (17) ಆತ್ಮಹತ್ಯೆ ಮಾಡಿಕೊಂಡವರು. ಈಕೆ ತಾಯಿ ಬುದ್ಧಿಮಾತು ಹೇಳಿ ಓದಲು ಹೇಳಿದ್ದು, ಸಮನ್ವಿ ಮನೆಯ ಬೆಡ್ ರೂಂಗೆ ಹೋಗಿ ಚಿಲಕ ಹಾಕಿಕೊಂಡಿದ್ದರು. ಬಹಳ ಹೊತ್ತು ಕಳೆದರೂ ಮಗಳು ಹೊರಬಾರದೇ ಇದ್ದಾಗ ಬಾಗಿಲನ್ನು ದೂಡಿ ಒಳಗೆ ಹೋಗಿ ನೋಡಲಾಗಿ ಕೋಣೆಯ ಪ್ಯಾನಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದಳು. ಆಕೆಯನ್ನು ಕೆಳಗಿಳಿಸಿ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರೂ ಶನಿವಾರ ರಾತ್ರಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

