ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಎವಿಎಂ ಹಾಸ್ಟೇಲ್‌ನಿಂದ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಮೂಲತಃ ಶಿವಮೊಗ್ಗದ ನಿವಾಸಿ ಎವಿಎಂ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ದರ್ಶನ್ ನಿಗೂಢವಾಗಿ ನಾಪತ್ತೆಯಾದವನು. ಹಾಸ್ಟೇಲ್‌ನಲ್ಲಿದ್ದು ಕಲಿಯುತ್ತಿದ್ದ ಈತ ಆ. 18ರಂದು ಹಾಸ್ಟೇಲ್‌ನಿಂದ ಹೊರಹೋದವನು ವಾಪಾಸು ಬಾರದೇ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. ಯಾರಾದರೂ ಮಾಹಿತಿ ದೊರೆತ್ತಲ್ಲಿ 9880948077 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಆಗುಂಬೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

