ವಿದ್ಯಾರ್ಥಿಗಳು ಮಾಡುವ ಕೆಲಸದ ಗುಣಮಟ್ಟ ಅತ್ಯುತ್ತಮವಾಗಿರಬೇಕು, ಅವಮಾನವಾದಾಗಲೇ ಸ್ವಾಭಿಮಾನ ಬೆಳೆಯುವುದು.ಸ್ವಂತಕೌಶಲ್ಯ ಬೆಳೆಸಿಕೊಳ್ಳಿ.ಹಿಂದಿನವರಿಗೆ ಅವಕಾಶಗಳು ಕಡಿಮೆಇದ್ದರೂ ಸಾಧನೆ ಮಾಡುವವರ ಸಂಖ್ಯೆ ಹೆಚ್ಚಿತ್ತು ಆದರೆ ಇಂದು ವಿದ್ಯಾರ್ಥಿಗಳಿಗೆ ಅವಕಾಶಾಗಳು ತುಂಬಾಇದ್ದರೂಅದನ್ನು ಉಪಯೋಗಿಸಿಕೊಳ್ಳುವವರ ಸಂಖ್ಯೆಕಡಿಮೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಡಾ.ರಾಮಕೃಷ್ಣ ಆಚಾರ್, ನಿರ್ವಹಣಾ ನಿರ್ದೇಶಕರು,ಎಸ್.ಕೆ.ಎಫ್. ಎಲಿಕ್ಸ್ರ್ ಇಂಡಿಯಾ ಫ್ರೈವೆಟ್ ಲಿಮಿಟೆಡ್ ಅವರು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಮಾತನಾಡಿ, ವಿದ್ಯಾರ್ಥಿ ಸಂಘ ಉತ್ತಮವಾಗಿ ಮುಂದುವರಿದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ತಿಳಿಸಿದರು. ‘ಶತ ಪ್ರಯತ್ನದಿಂದ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ’ಎಂದು ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಈ ಸಂದರ್ಭದಲ್ಲಿ, ಕಾಲೇಜಿನ ಕಛೇರಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಕೃಷ್ಣಯ್ಯ ನಾಯ್ಕ್ ಇವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಅವರ ಬಗ್ಗೆ ಕಾಲೇಜಿನ ಕಛೇರಿ ಅಧೀಕ್ಷಕ ರಾಜೇಶ್ ಕುಮಾರ್ ಮಾತನಾಡಿದರು. ಹಾಗೆಯೇ ಕಳೆದ ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಪದವಿ ಹಾಗೂ ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕಿ ಸಾಕ್ಷಿ ಹೆಚ್. ಶೆಟ್ಟಿ ಮಾತನಾಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದಾಗಿ ತಿಳಿಸಿದರು.ಭೌತಶಾಸ್ತ್ರ ವಿಭಾಗ ಮುಖ್ಯಸ್ಥೆಸುವರ್ಣಲತಾ ಶೆಣೈಸಾಧಕರ ವಿವರ ನೀಡಿದರು. ವಿದ್ಯಾರ್ಥಿ ಸಂಘದ ಪದವಿ ಪೂರ್ವ ವಿಭಾಗದ ಉಪಾಧ್ಯಕ್ಷೆ ಪೂರ್ಣಿಮಾ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿ ಸಂಘದ ಪದವಿ ವಿಭಾಗದ ಉಪಾಧ್ಯಕ್ಷ ಮೊಹಮ್ಮದ್ ಜುನೈದ್, ಪದವಿ ಪೂರ್ವ ವಿಭಾಗದ ಜಂಟಿ ಕಾರ್ಯದರ್ಶಿ ಶಾಲಿನಿ ಪದಾಧಿಕಾರಿಗಳ ಪರಿಚಯ ನೀಡಿದರು. ಪದವಿ ವಿಭಾಗದ ಪ್ರಧಾನ ಕಾರ್ಯದರ್ಶಿ ನವ್ಯಾ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ನಿವೇದಿತಾ ವಂದಿಸಿದರು.ಗ್ರಾಹಕ ವೇದಿಕೆ ಕಾರ್ಯದರ್ಶಿ ಹರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.