ಸುಬ್ರಹ್ಮಣ್ಯ: ನ.3 ರಂದು ರಾಜ್ಯ ಮಟ್ಟದ ನೆಟ್‌ಬಾಲ್ ಕ್ರೀಡಾಕೂಟ 2025-26

0
23

ಕುಕ್ಕೆ ಸುಬ್ರಹ್ಮಣ್ಯ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ನೆಟ್‌ಬಾಲ್ ಕ್ರೀಡಾಕೂಟ 2025-26 ನವೆಂಬರ್ 3, ಸೋಮವಾರದಂದು ಭವ್ಯವಾಗಿ ಆರಂಭಗೊಳ್ಳಲಿದೆ.

ಕಾರ್ಯಕ್ರಮದ ಉದ್ಘಾಟನೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯದ ಗಣ್ಯರು ಆಗಮಿಸಲಿದ್ದಾರೆ.

ಧ್ವಜಾರೋಹಣವನ್ನು ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಲಿದ್ದಾರೆ.
ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ, ಮುಜರಾಯಿ ಹಾಗೂ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ ಅವರು ನೆರವೇರಿಸಲಿದ್ದಾರೆ.
ಅಧ್ಯಕ್ಷತೆ ವಹಿಸಲಿರುವವರು ಕುಮಾರಿ ಭಾಗೀರಥಿ ಮುರುಳ್ಯ, ಶಾಸಕಿ, ಸುಳ್ಯ ವಿಧಾನಸಭಾ ಕ್ಷೇತ್ರ. ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಸನ್ಮಾನ್ಯ ಯು.ಟಿ. ಬಾದರ್ ಫರೀದ್, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು (ಲೋಕಸಭೆ, ದ.ಕ.), ಡಾ. ಭರತ್ ಶೆಟ್ಟಿ ವೈ., ಶಾಸಕರು (ಮಂಗಳೂರು ಉತ್ತರ), ರಾಜೇಶ್ ನಾಯ್ಕ ಯು., ಶಾಸಕರು (ಬಂಟ್ವಾಳ), ಡಿ. ವೇದವ್ಯಾಸ ಕಾಮತ್, ಶಾಸಕರು (ಮಂಗಳೂರು ದಕ್ಷಿಣ), ಐವನ್ ಡಿ’ಸೋಜ, ಶಾಸಕರು (ವಿಧಾನಪರಿಷತ್), ಮಂಜುನಾಥ ಭಂಡಾರಿ, ಶಾಸಕರು (ವಿಧಾನಪರಿಷತ್), ಡಿ. ವೀರೇಂದ್ರ ಹೆಗ್ಗಡೆ, ಸಂಸದರು (ರಾಜ್ಯಸಭೆ), ಹರೀಶ್ ಪೂಂಜ, ಶಾಸಕರು (ಬೆಳ್ತಂಗಡಿ), ಶ್ರೀ ಉಮಾನಾಥ ಎ. ಕೋಟ್ಯಾನ್, ಶಾಸಕರು (ಮೂಡಬಿದ್ರೆ), ಅಶೋಕ್ ಕುಮಾರ್ ರೈ, ಶಾಸಕರು (ಪುತ್ತೂರು), ಎಸ್.ಎಲ್. ಭೋಜೇಗೌಡ, ಪ್ರತಾಪಸಿಂಹ ನಾಯಕ್ ಕೆ., ಡಾ. ಧನಂಜಯ ಸರ್ಜಿ ಹಾಗೂ ಕಿಶೋರ್ ಬಿ.ಆರ್. ಶಾಸಕರು (ವಿಧಾನಪರಿಷತ್) ಸನ್ಮಾನ್ಯ ಅತಿಥಿಗಳಾಗಿ ಗಣ್ಯರು ಹಾಜರಾಗಲಿದ್ದಾರೆ.

ಪತ್ರಿಕಾಗೋಷ್ಠಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಬ್ಲೆ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್, ರಾಧಾಕೃಷ್ಣ ದೈಹಿಕ ಶಿಕ್ಷಣ ಉಪನ್ಯಾಸಕ ಹಾಗೂ ಕಾಲೇಜು ಶಿಕ್ಷಕ ವರ್ಗದ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸ್ಪರ್ಧೆಗಳು ಮೂರು ದಿನಗಳ ಕಾಲ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here