ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ತುಂಬೆ ವಲಯದ ನರಿಕೊಂಬು ಕಾರ್ಯ ಕ್ಷೇತ್ರದ ಮಲ್ಲಿಗೆ ತಂಡದ ಶ್ರೀಮತಿ ಖತಿಜಮ್ಮ ರವರ ಮನೆ ಗಾಳಿ ಮಳೆ ಸಂದರ್ಭದಲ್ಲಿ ಹಾನಿಯಾಗಿದ್ದು ದುರಸ್ತಿಗೆ ಶ್ರೀ ಕ್ಷೇತ್ರದಿಂದ ಮಂಜುವರಾದ ಸಹಾಯಧನವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ನರಿಕೊಂಬು ಎ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಫಲ್ಯ, ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ಸೇವಾ ಪ್ರತಿನಿಧಿಗಳಾದ ಕುಸುಮಾವತಿ ಪ್ರತಿಭಾ, ಸಂಘದ ಸದಸ್ಯ ಆಯೀಸ ಬಾನು ಉಪಸ್ಥಿತರಿದ್ದರು.

