ಈ ಚಿತ್ರ ನೋಡಿ. ಇದು ಪಂಚ ಗ್ಯಾರಂಟಿಯ ರುವಾರಿ ಕನ್ನಡ ನಾಡು ಕಂಡ ಶ್ರೇಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಡವರ ಕಣ್ಣೀರೊರೆಸುವ ಶಾಸಕರೆಂದೇ ಪ್ರಸಿದ್ದಿ ಪಡೆದ ಪುತ್ತೂರು ಶಾಸಕ ಅಶೋಕ್ ರೈ ಅವರ ನಡುವಿನ ಸಂಬಂಧ ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಲು ಇದೇ ಸ್ನೇಹ ಕಾರಣ, ಪುತ್ತೂರಿಗೆ ಕುಡಿಯುವ ನೀರಿಗೆ 1006 ಕೋಟಿ ಬರಲು ಇದೇ ಸ್ನೇಹ ಕಾರಣ, ಪುತ್ತೂರಿಗೆ ಎರಡೂ ವರೆ ವರ್ಷದಲ್ಲಿ 2006 ಕೋಟಿ ಅನುದಾನ ಬರಲು ಇದೇ ಸ್ನೇಹ ಕಾರಣ, ಪುತ್ತೂರಿಗೆ ಕ್ರೀಡಾಂಗಣಕ್ಕೆ 15 ಎಕ್ರೆ ಜಾಗ ಮಂಜೂರಾಗಲು ಇದೇ ಸ್ನೇಹ ಕಾರಣ, ಪುತ್ತೂರಿಗೆ ಆಯುರ್ವೆದ ಕಾಲೇಜು ಮಂಜೂರಾಗಲು ಇದೇ ಸ್ನೇಹ ಕಾರಣ, ಪುತ್ತೂರಿನ ವಿವಿಧ ಜಾತಿ ಸಂಘಗಳಿಗೆ ನಿವೇಶನ ಮಂಜೂರಾಗಲು ಇದೇ ಸ್ನೇಹ ಕಾರಣ,ಪುತ್ತೂರಿನ ಬಡ ,ಅಶಕ್ತರಿಗೆ ಸಿ ಎಂ ಪರಿಹಾರ ನಿಧಿ ಮಂಜೂರಾಗಲು ಇದೇ ಸ್ನೇಹ ಕಾರಣ, ಪುತ್ತೂರು ತಾಲೂಕಿನಲ್ಲಿ ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳ ಸಕ್ರಮಕ್ಕೆ ಸರಕಾರ ಒಪ್ಪಿಗೆ ನೀಡಲು ಇದೇ ಸ್ನೇಹ ಕಾರಣ, ಪುತ್ತೂರಿನ ಜನಮನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬರಲು ಇದೇ ಸ್ನೇಹ ಕಾರಣ,ಅಶೋಕ್ ರೈ ಕೇಳಿದ್ದನ್ನೆಲ್ಲಾ ಸಿದ್ದರಾಮಯ್ಯ ಕೊಡ್ತಾರಲ್ಲ ಅದಕ್ಕೆ ಇದೇ ಸ್ನೇಹ ಕಾರಣ.
ನಾಡಿನ ದೊರೆ ಓರ್ವ ಶಾಸಕನ ಭುಜಕ್ಕೆ ಕೈ ಹಾಕಿ ಕುಶಲೋಪರಿ ಮಾತನಾಡುತ್ತಾರೆಂದರೆ ಅದಕ್ಕೆಗಟ್ಟಿಯಾದ ಕಾರಣ ಬೇಕಾಗುತ್ತದೆ ಆತ್ಮೀಯತೆ ಮತ್ತು ಅತಿಯಾದ ವಿಶ್ವಾಸ ಇದ್ದವರು ಮಾತ್ರ ಪರಸ್ಪರ ಭುಜಕ್ಕೆ ಕೈ ಇಟ್ಟು ಮಾತನಾಡುತ್ತಾರೆ .

