
ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ) ಹೈಕಾಡಿ ಸಂಸ್ಥೆ ವತಿಯಿಂದ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಐರೋಡಿ ಸಹಾಯಾರ್ಥವಾಗಿ ನಡೆದ ಪಾರಂಪರಿಕ ದೊಂದಿ ಬೆಳಕಿನ ಯಕ್ಷಗಾನ ದಿನಾಂಕ:15-11-2025 ನೇ ಶನಿವಾರ ದಂದು ಸಂಪನ್ನ ಗೊಂಡಿರುತ್ತದೆ. ಸಂಸ್ಥೆಯು ಐರೋಡಿ ಮಂಜುನಾಥ ಕುಲಾಲ ಯಡ್ತಾಡಿ ಇವರಿಗೆ ವೈದ್ಯಕೀಯ ನೆರವಿಗೆ 75000 ಮತ್ತು ಯಕ್ಷಗಾನದ ಯಕ್ಷಗಾನದ ಟ್ರಯಲ್ ಖರ್ಚು (4 ದಿವಸದ ಹಾಲ್ ಬಾಡಿಗೆ , ಚಾ-ತಿಂಡಿ, ಮೈಕ್ ಚಾರ್ಜ್) 25,000/- ಸೇರಿ 1ಲಕ್ಷ ರೂಪಾಯಿಯನ್ನು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶ್‌ನ್ ಸಂಸ್ಥೆಯ ಅಧ್ಯಕ್ಷರು ಕೃಷ್ಣಮೂರ್ತಿ ಹೈಕಾಡಿ ಮತ್ತು ಕಾರ್ಯದರ್ಶಿ ಮಹೇಶ್ ಹೈಕಾಡಿ ಚಾರ ಇವರು ಮಂಜುನಾಥ ಕುಲಾಲರ ಸ್ವ ಗೃಹಕ್ಕೆ ತೆರಳಿ ಹಸ್ತಾಂತರಿಸಿದರು. ಈ ಮೊದಲೇ ಯಕ್ಷಗಾನದ ಕಲಾವಿದರ ಗೌರವ ಕಾಣಿಕೆ ಮತ್ತು ಯಕ್ಷಗಾನದ ವೇಷ ಭೂಷಣಕ್ಕೆ ಸೇರಿದಂತೆ. 1,25000/-ರೂಪಾಯಿ ಐರೋಡಿ ಮಂಜುನಾಥ ಕುಲಾಲ ಯಡ್ತಾಡಿ ಇವರಿಗೆ ನೀಡಲಾಗಿತ್ತು. ದೊಂದಿ ಬೆಳಕಿನ ಯಕ್ಷಗಾನಕ್ಕೆ ಸರಿಸುಮಾರು 350೦೦೦ರೂ ವೆಚ್ಚವಾಗಿದ್ದು ದಾನಿಗಳಿಂದ ಮತ್ತು ಇತರ ಸಂಘ ಸಂಸ್ಥೆಗಳಿಂದ ಸುಮಾರು 270000ರೂ ಸಂಗ್ರಹವಾಗಿರುತ್ತದೆ . ಕಡಿಮೆಯಾಗಿರುವ 80,000/- ಹಾಗೂ ಐರೋಡಿ ಅವರ ಖಾತೆಗೆ ಹಾಕಿದ 1,00,000/- ರೂಪಾಯಿಯನ್ನು ಸಂಸ್ಥೆಯು ಭರಿಸಿರುತ್ತದೆ..ಸಹಕರಿಸಿದ ಎಲ್ಲಾ ದಾನಿಗಳಿಗೂ, ಸಂಘ ಸಂಸ್ಥೆಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.ವೈದ್ಯಕೀಯ ಸಹಾಯಾರ್ಥವಾಗಿ ನಡೆದ ಸಂಸ್ಥೆಯ ಕಾರ್ಯಕ್ರಮಕ್ಕೆ ಸಹಕರಿಸುವವರು ಸಂಪರ್ಕಿಸಿ:9743682692.
