ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ರಾಜ್ಯಾದ್ಯಂತ ಉತ್ತಮ ಸೇವೆಯನ್ನು ಸುಮಾರು 200 ಕ್ಕೂ ಹೆಚ್ಚು ಬಸ್ಸುಗಳಿಂದ ಕಳೆದ 30 ವರ್ಷಗಳಿಂದ ನೀಡುತ್ತಿರುವ ಸಂಸ್ಥೆ ಸುಗಮ ಟೂರಿಸ್ಟ್. ನಾರಾಯಣ ಪಿ.ಎಂ., ಚನ್ನ ಬಲ್ಲಾಳ್, ನಿತ್ಯಾನಂದ ಮಲ್ಯ, ಅಭಯ ಚಂದ್ರ ಜೈನ್, ಪ್ರಸಾದ್ ಸೇರಿ ಸ್ಥಾಪಿಸಿದ್ದು ಸುಗಮ ಟೂರಿಸ್ಟ್. ರಾಜ್ಯದ ಮೂಲೆ ಮೂಲೆಗೆ ಸೇವೆ ಒದಗಿಸಿ ಬಹಳ ಖ್ಯಾತಿಯನ್ನು ಗಳಿಸಿದೆ. ಮಾತ್ರವಲ್ಲ ನೂತನ ಆವಿಷ್ಕಾರದ ಬಸ್ಸುಗಳನ್ನು ಸೇವೆಯ ರೀತಿ ಒದಗಿಸುತ್ತಿದೆ. ಈ ಮೂಲಕ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹೊಸ ಮಾದರಿಯ ಬಸ್ಸುಗಳು ಸೇವೆಗೆ ಲಭಿಸುತ್ತಿವೆ. ಇತ್ತೀಚೆಗೆ ಶೌಚಾಲಯವನ್ನು ಹೊಂದಿರುವ ಬಸ್ಸನ್ನೂ ಪರಿಚಯಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಾಕಷ್ಟು ಬೆಂಬಲ ನೀಡುತ್ತಿರುವುದನ್ನು ಸ್ಮರಿಸಿಕೊಳ್ಳ ಬಹುದಾಗಿದೆ.