ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದಿಂದ ಸ್ವಾಗತ : ಗೌರವ
ಹೆಬ್ರಿ : ಹೆಬ್ರಿಗೆ ಬುಧವಾರ ಆಗಮಿಸಿದ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಅವರನ್ನು ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು.
ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೇಶವ ಆಚಾರ್ಯ ಮುದ್ರಾಡಿ ಸ್ವಾಗತಿಸಿ ಗೌರವಿಸಿದರು. ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಪ್ರಮುಖರಾದ ಶಿವಪುರ ರತ್ನಾಕರ ಆಚಾರ್ಯ, ರಾಜೇಶ ಆಚಾರ್ಯ ಮಠದಬೆಟ್ಟು, ಬಿ.ಎಂ.ಶೇಖರ ಆಚಾರ್ಯ ಹೆಬ್ರಿ, ನರಸಿಂಹ ಆಚಾರ್ಯ ವರಂಗ, ಜಯರಾಮ ಆಚಾರ್ಯ ಹುತ್ತುರ್ಕೆ ಸಹಿತ ವಿವಿಧ ಮುಖಂಡರು ಉಪಸ್ಥಿತರಿದ್ದರು

