ಸುಳ್ಕೇರಿ: ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕು ರೈತ ಸದಸ್ಯರ ಪ್ರಶಿಕ್ಷಣ ವರ್ಗ

0
132

ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ) ಕರ್ನಾಟಕ ದಕ್ಷಿಣ ಪ್ರಾಂತ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ತಾಲೂಕು ಸಮಿತಿ ಮತ್ತು ಗ್ರಾಮ ಸಮಿತಿ ರೈತ ಸದಸ್ಯರ ಪ್ರಶಿಕ್ಷಣ ವರ್ಗ ಶ್ರೀ ರಾಮ ಶಾಲೆ ಸುಳ್ಕೇರಿಯಲ್ಲಿ ದಿನಾಂಕ 26 10 2025 ರ ರವಿವಾರ ಬೆಳಿಗ್ಗೆ ಗಂಟೆ 9.00 ರಿಂದ ಸಂಜೆ 4:00 ರ ವರೆಗೆ ನಡೆಯಿತು.


ಕಾರ್ಯಕ್ರಮವು ಗೋಪೂಜೆಯ ಮುಖಾಂತರ ಪ್ರಾರಂಭಗೊಂಡು ಕಾರ್ಯಕ್ರಮದ ಅಧ್ಯಕ್ಷರೂ, ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರೂ ಆಗಿರುವ ಎಸ್ ಆರ್ ಭಾಸ್ಕರ್ ಶಿರ್ಲಾಲು ಇವರು ಧ್ವಜಾರೋಹಣಗೈವುವ ಮೂಲಕ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು.


ಮುಖ್ಯ ಅತಿಥಿಗಳಾಗಿ ರಾಜು ಪೂಜಾರಿ ಅಧ್ಯಕ್ಷರು ಶ್ರೀರಾಮ ಶಾಲೆ ಸುಳ್ಕೇರಿ, ಭೀಮ ಸೇನಾ ಕೊಕರೆ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಭಾರತೀಯ ಕಿಸಾನ್ ಸಂಘ, ಪುಟ್ಟಸ್ವಾಮಿ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ, ರಮೇಶ್ ರಾಜು ಅಧ್ಯಕ್ಷರು ಕರ್ನಾಟಕ ದಕ್ಷಿಣ ಪ್ರಾಂತ್ಯ, ನಾರಾಯಣಸ್ವಾಮಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ, ಪುಟ್ಟಮ್ಮ ಶ್ರೀಕಂಠೇಗೌಡ ಮಹಿಳಾ ಪ್ರಮುಖರು ದಕ್ಷಿಣ ಪ್ರಾಂತ್ಯ ಮಹಿಳಾ ಪ್ರಮುಖರು, ಸುಬ್ರಾಯ ಬಿ ಎಸ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರತಿನಿಧಿ, ಸತ್ಯನಾರಾಯಣ ಭಟ್ ಅಧ್ಯಕ್ಷರು ಭಾರತೀಯ ಕಿಸಾನ್ ಸಂಘ ದಕ್ಷಿಣ ಕನ್ನಡ ಜಿಲ್ಲೆ, ಅಂಬುಜಾಕ್ಷ ಪ್ರಧಾನ ಕಾರ್ಯದರ್ಶಿ ಭಾರತೀಯ ಕಿಸಾನ್ ಸಂಘ ದಕ್ಷಿಣ ಕನ್ನಡ ಜಿಲ್ಲೆ, ಶಾಂಭವಿ ಮಹಿಳಾ ಪ್ರಮುಖರು ಭಾರತೀಯ ಕಿಸಾನ್ ಸಂಘ ದಕ್ಷಿಣ ಕನ್ನಡ ಜಿಲ್ಲೆ, ಲಯನ್ ನಿತ್ಯಾನಂದ ನಾವರ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿ ಭಾರತೀಯ ಕಿಸಾನ್ ಸಂಘ ಶಿವಾನಂದ ಹೆಗಡೆ ಕರಂಬಾರು ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿ ಭಾರತೀಯ ಕಿಸಾನ್ ಸಂಘ, ಲಿಂಗಪ್ಪನಾಯ್ಕ ಪ್ರಧಾನ ಕಾರ್ಯದರ್ಶಿ ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕು, ಜಯ ಸಾಲಿಯನ್ ಉಪಾಧ್ಯಕ್ಷರು ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕು, ವಿಜಯಕುಮಾರ್ ಜೈನ್ ನಾವರ ಮಾಧ್ಯಮ ಪ್ರಮುಖರು ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕು, ಶೀಲಾ ಮಹಿಳಾ ಪ್ರಮುಖರು ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ರೈತ ಗೀತೆಯನ್ನು ಬಳಂಜ ಗ್ರಾಮದ ಪ್ರವೀಣ್ ದೇವಾಡಿಗ, ರತ್ನಾಕರ ಶೆಟ್ಟಿ ಪ್ರದೀಪ ರವರು ಹಾಡಿದರು. ದೇವಿ ಪ್ರಸಾದ್ ಅರ್ವ ಹಾಗೂ ಶ್ರೀ ಲಿಂಗಪ್ಪನಾಯ್ಕ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಬಂದ ಅತಿಥಿಗಳನ್ನು ತಾಲೂಕಿನ ಉಪಾಧ್ಯಕ್ಷರಾದ ಜಯಶಾಲಿಯನ್ ರವರು ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕಿನ ಸುಮಾರು 42 ಗ್ರಾಮಗಳ ಸುಮಾರು 200 ರೈತ ಸದಸ್ಯರು ಭಾಗವಹಿಸಿ ತರಬೇತಿಯನ್ನು ಪಡೆದರು.ಲಯನ್ ನಿತ್ಯಾನಂದ ನಾವರ ರವರ ಧನ್ಯವಾದದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here