ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ, ನಾರಾವಿ ವಲಯದ ಸುಲ್ಕೇರಿ ಒಕ್ಕೂಟದ ಮಂದಾರ ಸಂಘದ ಸದಸ್ಯೆಯಾದ ನಳಿನಿರವರ ಸಹೋದರ ನವೀನರಿಗೆ ಶ್ರೀ ಕ್ಷೇತ್ರದ ವತಿಯಿಂದ ಮಾಸಾಶನ ಪಡೆಯುತ್ತಿದ್ದು , ಇದೀಗ ಇವರ ತಾಯಿಯಾದ ಕುಸುಮಾವತಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಜನಮಂಗಳ ಕಾರ್ಯಕ್ರಮದಡಿ “U ಶೇಪ್ ವಾಕರ್ “ಪರಿಕರಗಳನ್ನು ತಾಲೂಕಿನ ಯೋಜನಾಧಿಕಾರಿ ಅಶೋಕ್ ಬಿ. ರವರು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ನಾರಾವಿ ವಲಯದ ಮೇಲ್ವಿಚಾರಕಿ ವಿಶಾಲ ಕೆ., ಒಕ್ಕೂಟ ಅಧ್ಯಕ್ಷರಾದ ಯಶೋಧರ ಪೂಜಾರಿ, ಜನಜಾಗೃತಿ ಸದಸ್ಯರಾದ ಸದಾನಂದ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣ ಪೂಜಾರಿ, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ದಿನೇಶ್ ಶೆಟ್ಟಿ, ಸೇವಾಪ್ರತಿನಿಧಿ ಮಮತಾ ಶೆಟ್ಟಿ ಮತ್ತು ಮನೆಯ ಸದಸ್ಯರು ಉಪಸ್ಥಿತರಿದ್ದರು.